ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಶೈನಪ್ ಆದ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಆದರೆ ಆಕೆ ತೆಲುಗಿನಲ್ಲಿ ಗೀತಾ ಗೋವಿಂದಂ ಚಿತ್ರದ ಬಳಿಕ ಪಡೆದುಕೊಳ್ಳುತ್ತಿರೋ ಅವಕಾಶಗಳನ್ನು ಕಂಡು ದಕ್ಷಿಣಾ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಾಗಿದೆ. ವಿಜಯ್ ದೇವರಕೊಂಡನಿಗೆ ನಾಯಕಿಯಾಗಿ ನಟಿಸಿದ ಬಳಿಕ ಬೇರೆ ಬೇರೆ ಭಾಷೆಗಳಲ್ಲಿಯೂ ರಶ್ಮಿಕಾ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸೋ ಸದಾವಕಾಶ ಗಿಟ್ಟಿಸಿಕೊಂಡಿದ್ದಾಳೆ.
ಈಗ ಹರಿದಾಡುತ್ತಿರೋ ಸುದ್ದಿಯ ಪ್ರಕಾರವಾಗಿ ಹೇಳೋದಾದರೆ, ತೆಲುಗಿನಲ್ಲಿ ಫೇಮಸ್ಸಾಗಿರೋ ರಶ್ಮಿಕಾ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋ ಕ್ಷಣಗಳು ಹತ್ತಿರಾಗಿವೆ. ರಶ್ಮಿಕಾ ಇಳೆಯದಳಪತಿ ವಿಜಯ್ ಗೆ ನಾಯಕಿಯಾಗಿ ನಟಿಸಲಿದ್ದಾಳೆ!
ವಿಜಯ್ ಅರತ್ತಮೂರನೇ ಚಿತ್ರಕ್ಕೆ ಇತ್ತೀಚೆರಗಷ್ಟೇ ಮುಹೂರ್ತ ನಡೆದಿದೆ. ಈಗಾಗಲೇ ಥೇರಿ ಮತ್ತು ಮರ್ಸಲ್ನಂಥಾ ಚಿತ್ರಗಳನ್ನು ವಿಜಯ್ಗಾಗಿ ನಿರ್ದೇಶನ ಮಾಡಿರೋ ಆಟ್ಲಿ ಕುಮಾರ್ ಈ ಚಿತ್ರವನ್ನೂ ನಿರ್ದೇಶನ ಮಾಡಲಿದ್ದಾರೆ. ಇದೀಗ ಆರಂಭಿಕವಾಗಿ ಈ ಚಿತ್ರಕ್ಕೆ ರಶ್ಮಿಕಾಳನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗೆಗಿನ ಅಧಿಕೃತ ವಿಚಾರ ಇನ್ನಷ್ಟೇ ಹೊರ ಬೀಳಬೇಕಿದೆ.
ರಶ್ಮಿಕಾ ಈಗಾಗಲೇ ತೆಲುಗಿನಲ್ಲಿ ನಂಬರ್ ಒನ್ ನಾಯಕಿಯಂತೆ ಕಂಗೊಳಿಸುತ್ತಿದ್ದಾಳೆ. ಈಕೆ ಅಲ್ಲು ಅರ್ಜುನ್ ಮತ್ತು ಪ್ರಿನ್ಸ್ ಮಹೇಶ್ ಬಾಬು ಚಿತ್ರಗಳಲ್ಲಿಯೂ ನಾಯಕಿಯಾಗಿ ನಟಿಸಲಿದ್ದಾಳೆಂಬಂಥಾ ಸುದ್ದಿಯಿದೆ. ತೆಲುಗಿನಲ್ಲಂತೂ ಸಮಂತಾಳಂಥಾ ನಟಿಯರೇ ರಶ್ಮಿಕಾ ಮುಂದೆ ಮಂಕಾಗಿದ್ದಾರೆ. ಇದೀಗ ತಮಿಳುನಾಡಿನ ನಟಿಯರಿಗೂ ಅಂಥಾದ್ದೇ ಕಂಟಕ ಕಾದಂತಿದೆ!
#
No Comment! Be the first one.