ಕಿರಿಕ್ ಪಾರ್ಟಿ ಚಿತ್ರದ ಸಾನ್ವಿ ಎಂಬ ಪಾತ್ರದ ಮೂಲಕವೇ ಮನೆ ಮಾತಾದಾಕೆ ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಬಿಡುಗಡೆಯಾದ ಯಜಮಾನ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಈಗ ತೆಲುಗಿನಲ್ಲಿಯೂ ಬ್ಯುಸಿಯಾಗಿದ್ದಾಳೆ. ಗೀತಾ ಗೋವಿಂದಮ್ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಎರಡನೇ ಸಲ ಜೋಡಿಯಾಗಿ ನಟಿಸುತ್ತಿದ್ದಾಳೆ. ಯಾವಾಗ ಮತ್ತೆ ವಿಜಯ್ ದೇವರಕೊಂಡನ ಜೊತೆಗೇ ನಟಿಸುತ್ತಿದ್ದಾಳೋ ಇವರಿಬ್ಬರ ಸುತ್ತಾ ನಾನಾ ಥರದ ರೂಮರುಗಳೂ ಹರಿದಾಡಲಾರಂಭಿಸಿವೆ.
ಇಂಥಾ ರೂಮರುಗಳಿಗೆಲ್ಲ ಪುಷ್ಟಿ ಕೊಡುವಂಥಾ ಟ್ರಿಕ್ಕಿ ಸಾಲುಗಳನ್ನು ರಶ್ಮಿಕಾ ಟ್ವಟರ್ ಮೂಲಕ ಬರೆದುಕೊಂಡಿದ್ದಾಳೆ. ಇದೇ ಹೊತ್ತಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಂಥಾ ಮಾತುಗಳನ್ನೂ ಹೇಳಿಕೊಂಡಿದ್ದಾಳೆ. ಈ ಮೂಲವೇ ರಶ್ಮಿಕಾ ಮತ್ತೊಂದು ಸಲ ಲವ್ವಿನ ವಿಚಾರದಲ್ಲಿ ಸುದ್ದಿ ಕೇಂದ್ರಕ್ಕೆ ಬಂದಿದ್ದಾಳೆ.
ಇದು ನನ್ನ ಪಾಲಿಗೆ ಪ್ರೀತಿಸುವ ಸಮಯ. ನಿಜವಾಗಿ ಯಾರು ಪ್ರೀತಿಸುತ್ತಾರೆಂಬುದನ್ನು ಅರಿವಾಗಿಸಿಕೊಳ್ಳೋ ಸಮಯ. ಒಂದು ವೇಳೆ ನಿಮ್ಮನ್ನು ಯಾರೂ ಪ್ರೀತಿಸಿಲ್ಲ ಎಂದರೆ ಅವರಿಗೂ ಒಳ್ಳೆದಾಗಲಿ ಅಂತ ಹಾರೈಸಿ ಮುಂದೆ ಸಾಗಿ. ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಸದಾ ಕಾಲವೂ ಪ್ರೀತಿ, ಅಕ್ಕರೆಗಳಿಗೆ ಅರ್ಹರು ಎಂಬಂಥಾ ಮಾರ್ಮಿಕ ಶೈಲಿಯಲ್ಲಿ ರಶ್ಮಿಕಾ ಬರದುಕೊಂಡಿದ್ದಾಳೆ.
ಈ ಮೂಲಕ ರಶ್ಮಿಕಾ ಏನನ್ನು ಹೇಳ ಹೊರಟಿದ್ದಾಳೆ. ಈಕೆ ಯಾರೊಂದಿಗಾದರೂ ನಿಜವಾಗಿಯೂ ಲವ್ವಿಗೆ ಬಿದ್ದಿದ್ದಾಳಾ? ಈ ಮೂಲಕ ರಕ್ಷಿತ್ ಶೆಟ್ಟಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾಳಾ ಅಂತೆಲ್ಲ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿಯೇ ನಡೆಯುತ್ತಿವೆ. ಕೆಲ ಮಂದಿ ವಿಜಯ್ ದೇವರಕೊಂಡನ ಜೊತೆ ರಶ್ಮಿಕಾ ಲವ್ವಲ್ಲಿ ಬಿದ್ದಿದ್ದಾಳೆ ಎಂಬರ್ಥದಲ್ಲಿಯೂ ಮಾತಾಡುತ್ತಾ ರಶ್ಮಿಕಾಳ ಕಾಲೆಳೆಯುತ್ತಿದ್ದಾರೆ. ಆದರೆ ಇದ್ಯಾವುದರತ್ತಲೂ ಈಕೆ ತಲೆಕೆಡಿಸಿಕೊಂಡಂತಿಲ್ಲ.
ಇದೆಲ್ಲ ಏನೇ ಇದ್ದರೂ ರಶ್ಮಿಕಾ ಈಗ ಬಹು ಬೇಡಿಕೆಯ ನಟಿ. ಕನ್ನಡದಲ್ಲಿ ಯಜಮಾನ ಚಿತ್ರದ ಬೆನ್ನಿಗೇ ಪೊಗರು ಬಿಡುಗಡೆಗೆ ರೆಡಿಯಾಗುತ್ತಿದೆ. ತೆಲುಗಿನಲ್ಲಿ ಗೀತ ಗೋವಿಂದಂ ಚಿತ್ರದ ಮೂಲಕವೇ ರಶ್ಮಿಕಾ ಬೇಡಿಕೆ ಪಡೆದುಕೊಂಡಿದ್ದಾಳೆ. ವಿಜಯ್ ದೇವರಗೊಂಡನ ಜೊತೆ ಮೈ ಡಿಯರ್ ಕಾಮ್ರೆಡ್ ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದಾಳೆ. ಇತ್ತೀಚೆಗಷ್ಟೇ ಇದರ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿಕೊಂಡಿದೆ.
No Comment! Be the first one.