ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಟ್ರೆಂಡ್ ಹುಟ್ಟುಹಾಕಿರುವ ರತ್ನಮಂಜರಿ ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಏರುತ್ತಲೇ ಇದೆ. ಅಲ್ಲದೇ ಸಿನಿಮಾ ರಿಲೀಸ್ ದಿನಾಂಕವೂ ಹತ್ತಿರವಾಗುತ್ತಿದ್ದಂತೆ ಕೌತುಕತೆಯೂ ಹೆಚ್ಚಾಗುತ್ತಲೇ ಸಾಗುತ್ತಿದೆ. ಕನ್ನಡದ ಮೇಲಿರುವ ಪ್ರೀತಿ, ಗೌರವಾದರಗಳಿಗೆ ಹೊರ ದೇಶದಿಂದ ಬಂದು ರತ್ನಮಂಜರಿಯಂತಹ ಅಪ್ಪಟ ದೇಸಿ ಸಿನಿಮಾವನ್ನು ನಿರ್ಮಿಸುವಲ್ಲಿ ನಿರ್ಮಾಪಕರ ಶ್ರಮ ಆಧರಣೀಯವಾದದ್ದು.
ರತ್ನ ಮಂಜರಿ ಸಿನಿಮಾವನ್ನು ಪ್ರಸಿದ್ದ್ ನಿರ್ದೇಶನ ಮಾಡಿದ್ದು, ರಾಜ್ ಚರಣ್ ಎಂಬ ಯುವ ನಾಯಕನ ಎಂಟ್ರಿ ಈ ಚಿತ್ರದ ಮೂಲಕ ಆಗುತ್ತಿರುವುದು ವಿಶೇಷವಾಗಿದೆ. ಚೊಚ್ಚಲ ಚಿತ್ರದಲ್ಲಿಯೇ ಸವಾಲಿನ ಪಾತ್ರಕ್ಕೆ ಮಣೆ ಹಾಕಿರುವ ರಾಜ್ ಚರಣ್ ಪಾತ್ರವೂ ಸಿನಿಮಾದಲ್ಲಿ ಹಲವಾರು ಶೇಡುಗಳ ಮೂಲಕ ಅನಾವರಣಗೊಳ್ಳಲಿದೆಯಂತೆ.
ಇನ್ನು ರಾಜ್ ಚರಣ್ ಗೆ ಮೂವರು ನಾಯಕಿಯರಿದ್ದು, ಅಖಿಲಾ ಪ್ರಕಾಶ್, ಪಲ್ಲವಿ ರಾಜು ಮತ್ತು ಶ್ರದ್ಧಾ ಸಾಲಿಯಾನ್ ನಟಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಗರಡಿಯಲ್ಲಿ ಪಳಗಿರುವ ಅಖಿಲಾ ಕನ್ನಡಿಗರಿಗೆ ಹೊಸಬರೇನಲ್ಲ. ಇನ್ನು ಪಲ್ಲವಿ ರಾಜು ಕ, ಮಂತ್ರಂ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾಗಿದ್ದಾರೆ. ಹೊಸ ಅನುಭವದ ಕ್ರೈಮ್ ಥ್ರಿಲ್ಲರ್ ಸಿನಿಮಾ ರತ್ನಮಂಜರಿ ಮೇ 17ರಂದು ರಿಲೀಸ್ ಆಗಲಿದ್ದು, ಕನ್ನಡಿಗರ ನಿರೀಕ್ಷೆಯನ್ನು ಹುಸಿಗೊಳಿಸಲಾರದೆಂಬ ಭರವಸೆಯಲ್ಲಿದೆ ರತ್ನಮಂಜರಿ ಚಿತ್ರತಂಡ. ರತ್ನಮಂಜರಿ ಸಿನಿಮಾಕ್ಕೆ ಹಾಗೂ ಚಿತ್ರತಂಡಕ್ಕೆ ತುಂಬು ಹೃದಯದಿಂದ ಹಾರೈಸೋಣ.
Comments