ಕನ್ನಡದ ಕೆಜಿಎಫ್ ದೇಶಾಧ್ಯಂತ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಇದುವರೆಗೆ ಕನ್ನಡ ಚಿತ್ರಗಳೆಂದರೆ ತಾತ್ಸಾರದಿಂದ ನೋಡುತ್ತಾ ಮೂಗು ಮುರಿಯುತ್ತಿದ್ದವರೂ ಕೂಡಾ ಕೆಜಿಎಫ್ ಸಂಚಲನ ಕಂಡು ಗಾಬರಿ ಬಿದ್ದಿದ್ದಾರೆ. ದೇಶ ವಿದೇಶಗಳಿಂದ ಈ ಕ್ಷಣಕ್ಕೂ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಕೆಜಿಎಫ್ ವೀಕ್ಷಿಸಿರೋ ಬಾಲಿವುಡ್ ನಟಿ ರವೀನಾ ಟಂಡನ್ ಯಶ್ರನ್ನು ಮೆಚ್ಚಿ ಕೊಂಡಾಡಿದ್ದಾರೆ!
ರವೀನಾ ಕೆಜಿಎಫ್ ಚಿತ್ರವನ್ನು ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ತಕ್ಷಣವೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ವಿಶ್ವಾಧ್ಯಂತ ಸಂಚಲನ ಸೃಷ್ಟಿಸಿರೋ ಕೆಜಿಎಫ್ ಅನ್ನು ನೋಡಲೇ ಬೇಕೆಂದು ಬಹು ದಿನದಿಂದಲೂ ರವೀನಾ ಅಂದುಕೊಂಡಿದ್ದರಂತೆ. ಕಡೆಗೂ ಅಷ್ಟು ಕಾದು ನೋಡಿದ್ದೂ ಸಾರ್ಥಕವಾಯ್ತು. ಇದು ನಿಜಕ್ಕೂ ಒಳ್ಳೆ ಚಿತ್ರ. ಯಶ್ ಅಭಿನಯವಂತೂ ಬ್ರಿಲಿಯಂಟ್ ಆಗಿದೆ ಅಂತ ರವೀನಾ ಮೆಚ್ಚುಗೆ ಸೂಚಿಸಿದ್ದಾರೆ.
ಬಾಲಿವುಡ್ ನಟಿಯ ಈ ಮೆಚ್ಚುಗೆಯ ಮಾತುಗಳಿಗೆ ತಕ್ಷಣವೇ ಯಶ್ ಕೂಡಾ ಪ್ರತಿಕ್ರಿಯಿಸಿದ್ದಾರೆ. ರವೀನಾಗೆ ಧನ್ಯವಾದವನ್ನೂ ಹೇಳಿದ್ದಾರೆ. ಈಗಾಗಲೇ ತಮಿಳು ತೆಲುಗು ಸೇರಿದಂತೆ ಬಾಲಿವುಡ್ ನಟ ನಟಿಯರೂ ಕೆಜಿಎಫ್ ವೀಕ್ಷಿಸಿದ್ದಾರೆ. ಮನಃಪೂರ್ವಕವಾಗಿಯೇ ಮೆಚ್ಚಿಕೊಂಡಿದ್ದಾರೆ. ಈ ಮೂಲಕವೇ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರಗಳಿಗೊಂದು ಸ್ಥಾನವೂ ಸಿಕ್ಕಿದಂತಾಗಿದೆ.
https://twitter.com/TandonRaveena/status/1076734591950569472 #