ಕೆಲ ದಿನಗಳಿಂದ ಭಾರತ ಕ್ರಿಕೆಟ್ ಟೀಮಿನ ಕೋಚ್ ರವಿ ಶಾಸ್ತ್ರಿಯ ಹೊಸಾ ಅಫೇರಿನ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ನಟಿ ನಿಮ್ರತ್ ಕೌರ್ ಜೊತೆ ರವಿಶಾಸ್ತ್ರಿ ಇರೋ ಫೋಟೋಗಳ ರೆಕ್ಕೆಪುಕ್ಕ ಕಟ್ಟಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದವು. ಇದೀಗ ಖುದ್ದು ರವಿ ಶಾಸ್ತ್ರಿಯೇ ನಟಿಯೊಂದಿಗಿನ ತಮ್ಮ ಮತ್ತೊಂದು ಲವ್ ಸ್ಟೋರಿಯನ್ನು ಒಪ್ಪಿಕೊಂಡಿದ್ದಾರೆ!
ಅಷ್ಟಕ್ಕೂ ಕ್ರಿಕೆಟರ್ ರವಿ ಶಾಸ್ತ್ರಿಯ ಪ್ರೇಮ ಪ್ರಕರಣಗಳಿಗೆ ದಶಕಗಳಷ್ಟು ಹಿಂದಿನ ಇತಿಹಾಸವಿದೆ. ಈತ ಕ್ರಿಕೆಟ್ಗಿಂತಲೂ ಹೆಚ್ಚಾಗಿ ಬಾಲಿವುಡ್ ನಟಿಯರೊಂದಿಗಿನ ಸಂಬಂಧದಿಂದಲೇ ಸದ್ದು ಮಾಡಿದ್ದು ಹೆಚ್ಚು. ಇಂಥಾ ರವಿ ಶಾಸ್ತ್ರಿ ಇದೀಗ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದದ್ದು ನಟಿ ನಿಮ್ರತ್ ಕೌರ್ ಜೊತೆ ಕಂಡ ಕಂಡಲ್ಲಿ ಓಡಾಡುವ ಮೂಲಕ. ಇದೀಗ ಇದರ ಹಿಂದಿನ ಅಸಲೀ ಸತ್ಯ ರಸಿಕ ರವಿ ಶಾಸ್ತ್ರಿ ಕಡೆಯಿಂದಲೇ ಜಾಹೀರಾಗಿದೆ.
ರವಿಶಾಸ್ತ್ರಿ ಮತ್ತು ನಟಿ ನಿಮ್ರತ್ ಕೌರ್ ಈಗ್ಗೆ ಎರಡು ವರ್ಷಗಳಿಂದ ರಿಲೇಷನ್ ಶಿಪ್ಪಲ್ಲಿದ್ದಾರಂತೆ. ೨೦೧೫ರಲ್ಲಿ ನಡೆದಿದ್ದ ಜರ್ಮನ್ ಕಂಪೆನಿಯ ಕಾರ್ ಒಂದರ ಲಾಂಚಿಂಗ್ ಪ್ರೋಗ್ರಾಮಿನಲ್ಲಿ ರವಿಶಾಸ್ತ್ರಿ ಮತ್ತು ನಿಮ್ರತ್ ಭೇಟಿ ಸಂಭವಿಸಿತ್ತು. ಸುಂದರಿಯೊಬ್ಬಳ್ಳು ಕಣ್ಣೆದುರು ನಿಂತರೆ ಶಾಸ್ತ್ರಿಗೆ ಲವ್ವಾಗಲು ಹೆಚ್ಚು ಕಾಲವೇನೂ ಹಿಡಿಯೋದಿಲ್ಲ. ನಟಿ ನಿಮ್ರತ್ ಕೌರ್ ಮೇಲೆ ಕಣ್ಣಿಟ್ಟ ರವಿಶಾಸ್ತ್ರಿ ಮಾತಾಡಿಸಿದ್ದೇ ಅಲ್ಲೊಂದು ಗೆಳೆತನ ಮೂಡಿಕೊಂಡಿತ್ತಂತೆ. ಅದು ಪ್ರೇಮಕ್ಕೆ ತಿರುಗಿ ಮದುವೆಯ ಹಂಗಿಲ್ಲದೆ ಒಟ್ಟಿಗಿರೋವಷ್ಟರ ಮಟ್ಟಿಗೆ ಇಬ್ಬರೂ ಹತ್ತಿರಾಗಿದ್ದಾರಂತೆ!
ರವಿಶಾಸ್ತ್ರಿ ಹಳೇ ಪ್ರೇಮ ಪುರಾಣಗಳು, ಆತನ ಅಫೇರುಗಳನ್ನು ಬಲ್ಲವರಿಗೆ ಈ ಹೊಸಾ ಸ್ಟೋರಿ ಕೇಳಿ ಯಾವ ಅಚ್ಚರಿಯೂ ಕಾಡುವುದಿಲ್ಲ. ಈತ ಬಹು ಹಿಂದೆಯೇ ಕೈಹಿಡಿದಿದ್ದ ಪತ್ನಿ ರಿತುಗೆ ಡಿವೋರ್ಸ್ ಕೊಟ್ಟಿದ್ದ. ಆ ನಂತರದಲ್ಲಿ ಈ ತ ಭಾರಿ ಸುದ್ದಿಗೆ ಬಂದಿದ್ದದ್ದು ಸೈಫ್ ಅಲಿಖಾನ್ ಮಾಜಿ ಹೆಂಡತಿ ಅಮೃತಾ ಸಿಂಗ್ ಜೊತೆಗಿನ ಸಂಬಂಧದಿಂದ. ಆ ನಂತರ ಹೆಣ್ಣುಗಳನ್ನು ಬದಲಾಯಿಸುತ್ತಾ ಸಾಗಿದ ರವಿಶಾಸ್ತ್ರಿ ಸದ್ಯಕ್ಕೆ ನಿಮ್ರತ್ ಜೊತೆಗೆ ಅಡ್ಡಾಡುತ್ತಿದ್ದಾರೆ!
#
No Comment! Be the first one.