ಹೆಚ್ಚೂ ಕಮ್ಮಿ ಮೂವತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಕಸುಬು ನಡೆಸಿರುವ ನಿರ್ದೇಶಕ ರವಿಶ್ರೀವತ್ಸ. ಸಾಕಷ್ಟು ಯಶಸ್ವೀ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಾ, ಕನ್ನಡ ಸಿನಿಮಾಗಳಿಗೆ ಹೊಸ ಪದಗಳನ್ನು ಪರಿಚಯಿಸಿದವರು ಶ್ರೀವತ್ಸ. ಒಂದು ಕಾಲಕ್ಕೆ ಏಕತಾನತೆಯಲ್ಲಿ ಒಣಗಿಹೋಗಿದ್ದ ಚಿತ್ರರಂಗವನ್ನು ಬೇರೆ ಮಟ್ಟಕ್ಕೆ ಕೊಂಡೊಯ್ದ ಕೆಲವೇ ತಂತ್ರಜ್ಞರಲ್ಲಿ ರವಿ ಶ್ರೀವತ್ಸ ಕೂಡಾ ಒಬ್ಬರು. ಪಕ್ಕಾ ಆಕ್ಷನ್ ಚಿತ್ರಗಳ ಜೊತೆ ಜೊತೆಗೆ ಭಾವನೆಗಳನ್ನು ಬೆಸೆಯುವ ಕಲೆ ಶ್ರೀವತ್ಸರಿಗೆ ಸಿದ್ಧಿಸಿತ್ತು. ಈ ಕಾರಣಕ್ಕೇ ಡೆಡ್ಲಿ ಸೋಮ ಥರದ ಹಿಟ್ ಸಿನಿಮಾವನ್ನು ರವಿ ಶ್ರೀವತ್ಸ ನೀಡುವಂತಾಗಿದ್ದು. ಈವತ್ತಿಗೂ ಆಕ್ಷನ್ ಸಿನಿಮಾಗಳೆಂದರೆ ಮೊದಲು ನೆನಪಿಗೆ ಬರೋದೇ ರವಿಶ್ರೀವತ್ಸ.

ಇಂಥ ರವಿ ಶ್ರೀವತ್ಸ ಅವರ ನೆನಪುಗಳು ದೊಡ್ಡವು. ಅವರ ಹಾರ್ಡ್ ಡಿಸ್ಕ್ ಕೂಡಾ ಪ್ರತಿಯೊಂದನ್ನೂ ಸ್ಟೋರ್ ಮಾಡಿಕೊಂಡಿದೆ. ಅದ್ಭುತ ಮಾತುಗಾರಿಕೆ, ನಿರೂಪಣಾ ಶೈಲಿಯನ್ನೂ ಹೊಂದಿರುವ ರವಿ ಶ್ರೀವತ್ಸ ಈಗ ‘ಡೆಡ್ಲಿ ಡೈರಿ’ ಹೆಸರಿನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ವೀರಕಪುತ್ರ ಶ್ರೀನಿವಾಸ್ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಕನ್ನಡ ಮಾಣಿಕ್ಯ ಪತ್ರಿಕೆ ತನ್ನದೇ ಯೂ ಟ್ಯೂಬ್ ಚಾನಲ್ಲನ್ನೂ ಹೊಂದಿದೆ. ಈ ತಾಣದಲ್ಲಿ ರವಿ ಶ್ರೀವತ್ಸ ಅವರ ಅನುಭವ ಕಥನ ಸಂಚಿಕೆ ರೂಪದಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಹನ್ನೊಂದು ಸಂಚಿಕೆಯನ್ನು ಪೂರೈಸಿರುವ ಡೆಡ್ಲಿ ಡೈರಿ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ.

ತೊಂಭತ್ತರ ದಶಕದಲ್ಲಿ ಬಂದ ಜಾಕಿಚಾನ್ ಸಿನಿಮಾದ ವಿರುದ್ಧ ಬಿಜೆಪಿ ಪ್ರತಿಭಟಿಸಿದ್ದು ಯಾಕೆ? ದೇಹ ಸುಟ್ಟು ಪ್ರಾಣ ಹೋಗುತ್ತಿದ್ದರೂ ಆ ವ್ಯಕ್ತಿಯ ಬಯಕೆ ಏನಾಗಿತ್ತು? ಥ್ರಿಲ್ಲರ್ ಮಂಜುಗೆ ಎದುರಾದ ಅಗ್ನಿ ಪರೀಕ್ಷೆ ಯಾವುದು? ಸಾಯಿಕುಮಾರ್ ಹೆದರಿಕೊಂಡು ಹೈದರಾಬಾದಿಗೆ ಪರಾರಿಯಾಗಿದ್ದು ಯಾಕೆ? ಡೇವಿಡ್ ಅವರಿಗೆ ಕೊಬ್ರಿ ಮಂಜು ಹೊಡೆದಿದ್ದೇಕೆ? ಸಾಯಿಕುಮಾರ್ ಅವರ ಅನಿಸಿಕೆ ತಿರುಚಿದ ಕಾರಣಕ್ಕೆ ಆದ ಅನಾಹುತಗಳೇನು? ಯಶಸ್ಸಿನ ತುತ್ತತುದಿಯಲ್ಲಿದ್ದ ಸಾಯಿಕುಮಾರ್ ಅವರು ತಮ್ಮ ಅಸ್ತಿತ್ವ ಕಳೆದುಕೊಂಡಿದ್ಯಾಕೆ? ಸಾಯಿಕುಮಾರ್ ಅವರನ್ನು ಏರ್ ಪೋರ್ಟಿನಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಚಿತ್ರತಂಡ ಯಾವುದು? ಹೀಗೆ ಸಾಕಷ್ಟು ಕೌತುಕತ ವಿಚಾರಗಳನ್ನು ರವಿ ಶ್ರೀವತ್ಸ ಅನಾವರಣಗೊಳಿಸಿದ್ದಾರೆ. ಅದರ ಒಂದು ಸ್ಯಾಂಪಲ್ ಇಲ್ಲಿದೆ. ಎಲ್ಲ ಎಪಿಸೋಡುಗಳನ್ನೂ ನೋಡಲು Kannada Maanikya ಚಾನೆಲ್ subscribe ಮಾಡಿಕೊಳ್ಳಿ.

CG ARUN

ಶಿವಾರ್ಜುನ ನಿರ್ದೇಶಕ ಶಿವ ತೇಜಸ್ ಲೈಫ್ ಸ್ಟೋರಿ!

Previous article

ಮಾರ್ಚ್ ತಿಂಗಳಲ್ಲಿ ಬರುವ ಸಿನಿಮಾಗಳ ಕತೆ ಏನಾಗಲಿದೆ?

Next article

You may also like

Comments

Leave a reply

Your email address will not be published. Required fields are marked *