ಕನಸುಗಾರ ರವಿಚಂದ್ರನ್ ಬಹುನಿರೀಕ್ಷಿತ ಚಿತ್ರ ರಾಜೇಂದ್ರ ಪೊನ್ನಪ್ಪ. ಕ್ರೇಜಿಸ್ಟಾರ್ ಹಳೇ ಸೋಲುಗಳಿಂದ ಮೈ ಕೊಡವಿಕೊಂಡು ಮೇಲೇಳುವ ಜೋಶ್‌ನೊಂದಿಗೇ ಈ ಸಿನಿಮಾವನ್ನು ಶುರು ಮಾಡಿದ್ದರು. ಆರಂಭದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ರಾಜೇಂದ್ರ ಪೊನ್ನಪ್ಪನ ಸೌಂಡು ಇತ್ತೀಚೆಗೆ ಕಡಿಮೆಯಾದಂತಿದೆ. ಯಾಕೆ ಹೀಗೆ, ಮತ್ತೆ ಏನಾದರೂ ಕಂಟಕ ಎದುರಾಯ್ತಾ ಅಂತ ಅಭಿಮಾನಿಗಳು ಕಸಿವಿಸಿಗೊಂಡಿರುವಾಗಲೇ ಈ ಬಗ್ಗೆ ರವಿಮಾಮ ಮಾತಾಡಿದ್ದಾರೆ!
ಎಲ್ಲವೂ ಒಂದೇ ವೇಗದಲ್ಲಿ ನಡೆದಿದ್ದರೆ ಇಷ್ಟು ಹೊತ್ತಿಗೆಲ್ಲ ರಾಜೇಂದ್ರ ಪೊನ್ನಪ್ಪ ಚಿತ್ರ ತಯಾರಾಗಿ ಬಿಡುತ್ತಿತ್ತು. ಆದರೀಗ ಶೇಖಡಾ ಐವತ್ತರಷ್ಟು ಚಿತ್ರೀಕರಣ ಮುಗಿದಿದೆಯಂತೆ. ಇದೀಗ ರವಿಚಂದ್ರನ್ ಸಾಲು ಸಾಲಾಗಿ ಒಂದಷ್ಟು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಸದ್ಯ ದಶರಥ ಚಿತ್ರೀಕರಣ ನಡೆಯುತ್ತಿದೆ. ಅದಾದ ನಂತರ ರವಿಚಂದ್ರ ಎಂಬ ಸಿನಿಮಾ ಮುಗಿಸಿಕೊಂಡು ಕ್ರೇಜಿಸ್ಟಾರ್ ತಕ್ಷಣವೇ ರಾಜೇಂದ್ರ ಪೊನ್ನಪ್ಪ ಚಿತ್ರವನ್ನು ಕಂಪ್ಲೀಟ್ ಮಾಡಲಿದ್ದಾರಂತೆ. ಇದಿಷ್ಟು ವಿಚಾರವನ್ನ ಖುದ್ದು ರವಿಚಂದ್ರನ್ ಹೇಳಿಕೊಂಡಿರೋದರಿಂದ ಅಭಿಮಾನಿಗಳು ನಿರಾಳವಾಗಿದ್ದಾರೆ.
ರಾಜೇಂದ್ರ ಪೊನ್ನಪ್ಪ ಈ ಹಿಂದೆ ತೆರೆ ಕಂಡು ಹಿಟ್ ಆಗಿದ್ದ ಮಲ್ಲದಂಥಾದ್ದೇ ಕಮರ್ಶಿಯಲ್ ಚಿತ್ರ ಅಂತಲೂ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಈಗಾಗಲೇ ನಾಯಕಿ ರಾಧಿಕಾ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಈ ಸಿನಿಮಾವನ್ನ ಅದ್ದೂರಿಯಾಗಿಯೇ ನಿರ್ಮಾಣ ಮಾಡುತ್ತಿರೋ ಕ್ರೇಜಿಸ್ಟಾರ್, ತಾವು ಬೇರೆ ಚಿತ್ರಗಳಲ್ಲಿ ನಟಿಸುತ್ತಾ ಅದರಲ್ಲಿ ಬಂದ ಹಣವನ್ನು ತಮ್ಮ ಕನಸಿಗೆ ಮಾಡುತ್ತಿದ್ದಾರೆ. ಅವರು ಒಂದರ ಹಿಂದೊಂದರಂತೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರೋದೂ ಕೂಡಾ ಅದೇ ಕಾರಣಕ್ಕೆ!
#
No Comment! Be the first one.