- ಸುಮಾ.ಜಿ
೧೯೭೯ರಿಂದ ಸಿನಿಮಾ ರಂಗಕ್ಕೆ ಬಾಲ ನಟನಾಗಿ ಕಾಲಿಟ್ಟ ರವಿಶಂಕರ್ ಹಲವಾರು ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳನ್ನು ಸರಾಗವಾಗಿ ಮಾತನಾಡುವ ರವಿಶಂಕರ್ ಈ ಎಲ್ಲಾ ಭಾಷೆಗಳಲ್ಲೂ ಅಮರೀಶ್ ಪುರಿ, ಅಮಿತಾಬಚ್ಚನ್, ಡ್ಯಾನಿ, ಆಶಿಶ್ ವಿದ್ಯಾರ್ಥಿ, ಸೋನು ಸೂದ್, ಸತ್ಯರಾಜ್, ಪ್ರಕಾಶ್ ರಾಜ್ ಹೀಗೆ ಹಲವಾರು ನಟರಿಗೆ ಕಂಠದಾನ ಕಲಾವಿದರಾಗಿ ಕೆಲಸ ಮಾಡಿದ್ದಾರೆ.
ಕೆಂಪೇಗೌಡ ಚಿತ್ರದಲ್ಲಿ ಪಾತ್ರ ಮಾಡಲು ಕರೆ ಬಂದಾಗ ’ಸಾಯಿ ಕುಮಾರ್ ಎಂದು ತಿಳಿದು ನನಗೆ ಫೋನ್ ಮಾಡಿದ್ದೀರಿ. ನಾನು ಸಾಯಿ ಕುಮಾರ್ ಅಲ್ಲ ಅವರ ತಮ್ಮ ರವಿ’ ಎಂದಿದ್ದರಂತೆ ರವಿಶಂಕರ್. ತಮಿಳಿನ ಸಿಂಗಂ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು, ಸುದೀಪ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನೀವು ಪಾತ್ರ ಮಾಡಬೇಕು ಎಂದಾಗ ’ಯಾವುದೋ ಹೀರೋ ಜೊತೆಗೆ ಸಣ್ಣ-ಪುಟ್ಟ ಪಾತ್ರ ವಹಿಸಬೇಕೆಂದು ತಿಳಿದಿದ್ದರಂತೆ ರವಿಶಂಕರ್. ಆದರೆ ತಮಿಳಿನಲ್ಲಿ ಪ್ರಕಾಶ್ ರಾಜ್ ನಟಿಸಿರುವ ಪಾತ್ರವನ್ನು ನಿರ್ವಹಿಸಬೇಕೆಂದು ತಿಳಿದಾಗ ಆಶ್ಚರ್ಯವಾಗಿತ್ತಂತೆ. ಅದೂ ಅಲ್ಲದೆ ಸುದೀಪ್ ಅವರು ಆ ಪಾತ್ರಕ್ಕೆ ರವಿಶಂಕರ್ ಅವರೇ ಬೇಕು ಅಂತಾ ಹೇಳಿದ್ದರಂತೆ.
ನಟ ಸಾಯಿ ಕುಮಾರ್ ಸಹೋದರನಾಗಿದ್ದರಿಂದ ಸಾಯಿರವಿ ಎಂದೇ ಕರೆಯುತ್ತಿದ್ದರು. ೨೦೧೨ರಲ್ಲಿ ಕೆಂಪೇಗೌಡ ಸಿನಿಮಾ ನಂತರ ರವಿಶಂಕರ್ ಎಂದೇ ಗುರುತಿಸಿಕೊಂಡಿದ್ದಾರೆ. ಕನ್ನಡದ ಮಣ್ಣಲ್ಲೇ ಹುಟ್ಟಿ ಬೆಳೆದ ಹಲವು ನಟ-ನಟಿಯರು ಕನ್ನಡ ಮಾತನಾಡುವುದಿರಲಿ ಕನ್ನಡದವರು ಎಂದು ಹೇಳಿಕೊಳ್ಳುವುದೇ ಅವಮಾನದ ವಿಷಯ ಎಂದು ತಿಳಿದಿದ್ದಾರೆ. ಇತ್ತೀಚೆಗೆ ತೆಲುಗಿನ ಮುಂಚೂಣಿಯಲ್ಲಿರುವ ಚಾನೆಲ್ವೊಂದರಲ್ಲಿ ರವಿಶಂಕರ್ ಸುದೀಪ್ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಲ್ಲದೆ ’ಜೈ ಕರ್ನಾಟಕ’ ಎಂದು ಹೃದಯತುಂಬಿ ನುಡಿದ್ದಾರೆ.
No Comment! Be the first one.