ಸಿನಿಮಾ ನೋಡುವವರ ಸಂಖ್ಯೆ ಅಲ್ಲೇ ಡಿವೈಡ್ ಆಗುವುದೆಂಬ ಸ್ಟಾರ್ ನಟರ ಸಿನಿಮಾಗಳನ್ನು ಸಾಮಾನ್ಯವಾಗಿ ಏಕಕಾಲಕ್ಕೆ ರಿಲೀಸ್ ಮಾಡುವ ವಾಡಿಕೆ ಕಡಿಮೆ. ಈ ಹಿಂದೆ ಏಕಕಾಲಕ್ಕೆ ಬಹಳಷ್ಟು ಸಿನಿಮಾಗಳು ರಿಲೀಸ್ ಆಗಿ ಕೆಲವು ಗೆದ್ದು, ಮತ್ತೆ ಕೆಲವು ಮಕಾಡೆ ಮಲಗಿದ ಸಾಕಷ್ಟು ಉದಾಹರಣೆಗಳಿವೆ. ಪರಭಾಷೆಗಳಲ್ಲಿ ಇಂತಹ ಕಾಂಪಿಟೇಷನ್ ಗಳಿಗೆ ಬರವಿಲ್ಲ. ತಮ್ಮ ತಮ್ಮ ನಿರ್ಮಾಪಕರ ಒಳಿತಿಗಾಗಿ ಅಂತಹ ಸಂದರ್ಭಗಳೇನಾದರೂ ಬಂದದ್ದೇ ಆದರೆ ಯಾವುದಾದರೂ ಸಿನಿಮಾ ತನ್ನ ರಿಲೀಸ್ ದಿನಾಂಕವನ್ನು ಬದಲಿಸಿಕೊಂಡು ತಟಸ್ಥವಾಗಿಬಿಡುತ್ತದೆ. ಇಷ್ಟೆಲ್ಲ ಯಾಕೆ ಹೇಳ್ತಿದ್ದೀನಿ ಅಂದುಕೊಂಡ್ರಾ..
ಮೋಸ್ಟ್ ಲೀ ಮುಂದಿನ ತಿಂಗಳು ಇಂತಹುದೇ ಪರಿಸ್ಥಿತಿ ಸ್ಯಾಂಡಲ್ ವುಡ್ ನಲ್ಲಿ ಎದುರಾಗುವುದು ಪಕ್ಕಾ ಆಗಿದೆ. ಈಗಾಗಲೇ ಜೂನ್ 14ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯು ಸಿನಿಮಾ ರಿಲೀಸ್ ದಿನಾಂಕವನ್ನು ಘೋಷಿಸಿಕೊಂಡಿದೆ. ಅದೇ ದಿನವೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾವು ತೆರೆಗೆ ಬರುವ ಸಾಧ್ಯತೆಗಳಿವೆಯೆಂದು ತಿಳಿದುಬಂದಿದೆ. ಆದರೆ ಅಧಿಕೃತವಾಗಿ ರುಸ್ತುಂ ತಂಡ ರಿಲೀಸ್ ದಿನಾಂಕವನ್ನೇನು ಘೋಷಣೆ ಮಾಡಿಲ್ಲ. ಆದರೆ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವುದಂತೂ ಪಕ್ಕಾ ಆಗಿದೆ. ಈ ಜೋಡಿ ಪ್ರೀತ್ಸೆ ಲವಕುಶ ಸಿನಿಮಾಗಳ ನಂತರ ಇಬ್ಬರನ್ನು ಒಟ್ಟಾಗಿ ನೋಡುವ ಭಾಗ್ಯ ಅಭಿಮಾನಿಗಳಿಗೆ ದೊರಕಿಯೇ ಇರಲಿಲ್ಲ. ಆದರೀಗ ಬೇರೆ ಬೇರೆ ಸ್ಕ್ರೀನ್ ಗಳಲ್ಲಾದರೂ ಒಂದೇ ದಿನ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಬಹುದೋ ನೋಡಬೇಕು.
No Comment! Be the first one.