ಇವತ್ತು ರೆಬಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟು ಹಬ್ಬ. ಬುಲ್ ಬುಲ್ ಸೀನಿಯರ್ ಇಲ್ಲದ ಜನ್ಮದಿನವನ್ನು ಅಭಿಮಾನಿಗಳು ನೋವಿನಲ್ಲಿಯೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
https://twitter.com/dasadarshan/status/1133580649787416576
ಇನ್ನು ಮಂಡ್ಯದಲ್ಲಿ ಅಂಬಿ ಹುಟ್ಟುಹಬ್ಬವನ್ನು ಸ್ವಾಭಿಮಾನಿಗಳ ವಿಜಯೋತ್ಸವ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಾಗೂ ದೌಲತ್ತಿನಲ್ಲಿದ್ದವರಿಗೆ ಮಣ್ಣು ಮುಕ್ಕಿಸಿದ ಪ್ರತೀಕವಾಗಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುವ ಮೂಲಕ ಮಂಡ್ಯ ಜನರಿಗೆ ಸುಮಲತಾ ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ. ರೆಬಲ್ ಸ್ವಾರ್ ಇಲ್ಲದ ಹುಟ್ಟುಹಬ್ಬಕ್ಕೆ ಅಂಬಿಯ ಹಿರಿಮಗನಂತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಅಂಬರೀಶ್ ಜೊತೆ ಕಾರಿನಲ್ಲಿ ಕುಳಿತಿರುವ ಫೋಟೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡುವ ಮೂಲಕ ಅಂಬರೀಶ್ ಅವರಿಗೆ ವಿಶ್ ಮಾಡಿದ್ದಾರೆ.
No Comment! Be the first one.