ನೇಪಾಳ ಎಂದಾಕ್ಷಣ ಕಾಮನ್ನಾಗಿ ಎಲ್ಲರಿಗೂ ಸ್ವೆಟ್ಟರ್, ಜರ್ಕಿನ್ ಇತ್ಯಾದಿಗಳು ಮಾರುವವರಷ್ಟೇ ನೆನಪಾಗುತ್ತಿದ್ದ ಕಾಲದಲ್ಲಿ ತನ್ನ ಪ್ರತಿಭೆ, ನಿರರ್ಗಳವಾಗಿ ಕನ್ನಡವನ್ನು ಮಾತನಾಡಬಲ್ಲ ಸಾಮರ್ಥ್ಯದಿಂದ ಕನ್ನಡದಲ್ಲಿ ಒಬ್ಬ ಸ್ಪುರಧ್ರೂಪಿ ನಟಿ, ಕಮೆಡಿಯನ್, ರಂಗ ಕಲಾವಿದೆ, ಧಾರವಾಹಿ ಇತ್ಯಾದಿ ಪ್ರಾಕಾರಗಳನ್ನು ಗುರುತಿಸಿಕೊಂಡ ರೇಖಾದಾಸ್ ನೆನಪಾಗುತ್ತಾರೆ.

ಹೌದು ನಟನಾ ಸಾಮರ್ಥ್ಯ ಅಗಾಧವಾಗಿದ್ದರೂ ತನ್ನ ಬದುಕಿಗೆ ಬೌಂಡರಿಯನ್ನೇ ಹಾಕಿಕೊಳ್ಳದೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ರೇಖಾದಾಸ್ ಪ್ರತಿಭೆಗೆ ಪುರಸ್ಕಾರವೊಂದು ದೊರೆತಿದೆ. ತಮಿಳುನಾಡಿನ ಯೂನಿವರ್ಸಿಟಿಯೊಂದು ರೇಖಾದಾಸ್ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. ಶಶಿಕುಮಾರ್ ಅಭಿನಯದ ಬಾರೆ ನನ್ನ ಮುದ್ದಿನ ರಾಣಿ ಸಿನಿಮಾದ ಮೂಲಕ ಬ್ರೇಕ್ ಪಡೆದಿದ್ದ ರೇಖಾ ದಾಸ್ ನಟ ಟೆನ್ನಿಸ್ ಕೃಷ್ಣರ ಪತ್ನಿಯಾಗಿಯೇ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವುದು ವಿಶೇಷ. ಪುರಸ್ಕೃತರಿಗೆ ಸಿನಿಬಜ್ ಕನ್ನಡ ಅಭಿನಂದನೆಗಳು.

 

CG ARUN

ಸೇಸಮ್ಮನಿಗೆ ಹುಟ್ಟುಹಬ್ಬದ ಸಂಭ್ರಮ

Previous article

ಮೆಜೆಸ್ಟಿಕ್ ನಿರ್ಮಾಪಕರ ಪಾಲಾದ ಜೋಡೆತ್ತು ಟೈಟಲ್!

Next article

You may also like

Comments

Leave a reply

Your email address will not be published. Required fields are marked *