ನಟ ಸಾರ್ವಭೌಮ ಚಿತ್ರದ ನಂತರ ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ರೇಮೋ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಕಾಂಬಿನೇಷನ್ನಿನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಸದ್ಯ ಚಿತ್ರತಂಡ ವಿಶೇಷ ಜಾಹೀರಾತನ್ನು ಹೊರಡಿಸಿದೆ. ಜಾಹೀರಾತಿನ ಪ್ರಕಾರ ಸಈ ಚಿತ್ರದಲ್ಲಿ ಸಹ ನಟರಾಗಿ ಅಭಿನಯಿಸಲು ಯುವತಿಯರು ಬೇಕಾಗಿದ್ದಾರೆ. ಹೀಗಾಗಿ ಚಿತ್ರತಂಡದವರು 18 ರಿಂದ 25 ವಯಸ್ಸಿನ ಆಸಕ್ತ ಯುವತಿಯರಿಗಾಗಿ ಆಡಿಶನ್ ಕರೆದಿದ್ದಾರೆ.
ಈ ಆಡಿಶನ್ ಇದೇ ತಿಂಗಳ 13 ರಂದು ಶೆರಟಾನ್ ಹೋಟೆಲ್, ಒರಾಯನ್ ಮಾಲ್ ನಲ್ಲಿ ನಡೆಯಲಿದೆ. ಸದ್ಯಕ್ಕೆ ಈ ಆಡಿಶನ್ ನ ಎರಡು ಪೋಸ್ಟರ್ ಗಳನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಮಿಕ್ಕ ಮಾಹಿತಿಗಳನ್ನು ಇಷ್ಟರಲ್ಲೇ ತಿಳಿಸಲಿದೆ. ಹೆಚ್ಚಿನ ಮಾಹಿತಿಗೆ ಪೋಸ್ಟರಿನಲ್ಲಿರುವ ಫೋನ್ ನಂಬರಿಗೆ ಕರೆ ಮಾಡಬಹುದಾಗಿದೆ.