ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಮೊದಲ ಹಾಡು ವಾರದ ಹಿಂದೆ ಬಿಡುಗಡೆಯಾಗಿತ್ತು. ಆ ಹಾಡು ಸೃಷ್ಟಿಸಿದ ಕ್ರೇಜ್ ಕಂಡೇ ಎಲ್ಲರೂ ಅಚ್ಚರಿಗೊಂಡಿದ್ದರು. ಆ ಹಾಡಿನ ಅಲೆ ಎಲ್ಲೆಡೆ ಹರಡಿರೋವಾಗಲೇ ಇದೀಗ ಎರಡನೇ ಹಾಡೂ ಬಿಡುಗಡೆಯಾಗಿದೆ. ಇದಕ್ಕೂ ಕೂಡಾ ಭರಪೂರ ಮೆಚ್ಚುಗೆಗಳೇ ಕೇಳಿ ಬರಲಾರಂಭಿಸಿವೆ.
ಈ ಸುಂದರ ಕಲ್ಯಾಣ ಮುದ್ದು ಜೋಡಿಯ ಕಲ್ಯಾಣ ಎಂಬ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅನೂಪ್ ರುಬೆನ್ಸ್ ಸಂಗೀತದಲ್ಲಿ ಮೂಡಿ ಬಂದಿರೋ ಈ ಹಾಡನ್ನು ಬರೆದಿರುವವರು ವಿ. ನಾಗೇಂದ್ರ ಪ್ರಸಾದ್. ಈ ಹಾಡಿನ ಮೂಲಕವೇ ಸೀತಾರಾಮ ಕಲ್ಯಾಣದ ಫ್ಯಾಮಿಲಿ ಖದರಿನ ಅಂದಾಜೂ ಕೂಡಾ ಪ್ರೇಕ್ಷಕರಿಗೆ ಸಿಕ್ಕಿದೆ. ಬಿಡುಗಡೆಯಾಗಿ ಒಂದು ಘಂಟೆ ಕಳೆಯೋದರೊಳಗಾಗಿ ಹನ್ನೊಂದು ಸಾವಿರ ವೀಕ್ಷಣೆ ಪಡೆಯೋ ಮೂಲಕ ಈ ಹಾಡೂ ಕೂಡಾ ಸೂಪರ್ ಹಿಟ್ ಆಗೋ ಹಾದಿಯಲ್ಲಿದೆ.
ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರ ಚನ್ನಾಂಬಿಕಾ ಫಿಲಂಸ್ ಲಾಂಛನದಡಿಯಲ್ಲಿ ಮೂಡಿ ಬಂದಿದೆ. ಅನಿತಾ ಕುಮಾರಸ್ವಾಮಿ ಇದನ್ನು ನಿರ್ಮಾಣ ಮಾಡಿದ್ದಾರೆ. ಇದುವರೆಗೂ ನಾನಾ ಥರದಲ್ಲಿ ಸುದ್ದಿ ಕೇಂದ್ರದಲ್ಲಿರುವ ಸೀತಾರಾಮ ಕಲ್ಯಾಣ ಈಗ ಹಾಡುಗಳ ಮೂಲಕ ಪ್ರೇಕ್ಷಕರನ್ನ ಸೆಳೆದುಕೊಳ್ಳುತ್ತಿದೆ. ಹಾಡುಗಳಿಗೆ ಸಿಗುತ್ತಿರುವ ಭರಪೂರ ಮೆಚ್ಚುಗೆಯಿಂದಾಗಿ ಚಿತ್ರ ತಂಡ ಖುಷಿಗೊಂಡಿದೆ.
https://www.youtube.com/watch?v=CKOvaKWC8kQ #
No Comment! Be the first one.