ಶೀರ್ಷಿಕೆ ಮೂಲಕವೇ ಗಮನಸೆಳೆದಿದ್ದ ಆರ್ಎಚ್ 100 ಸಿನಿಮಾ ಇದೀಗ ಟ್ರೇಲರ್ ಬಿಡುಗಡೆ ಮಾಡಿಕೊಂಡ ಸಂಭ್ರಮದಲ್ಲಿದೆ. ಎಸ್.ಎಲ್.ಎಸ್ ಪ್ರೊಡಕ್ಷನ್ಸ್ನಡಿ ಹರೀಶ್ ಕುಮಾರ್ ಎಲ್ ನಿರ್ಮಿಸುತ್ತಿರುವ ‘ಆರ್ಎಚ್ 100’ ಚಿತ್ರವನ್ನು ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವನದಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ಹಮ್ಮಿಕೊಂಡಿತ್ತು.
ಆ್ಯಕ್ಟ್ 1978 ಚಿತ್ರದ ನಿರ್ಮಾಪಕ ದೇವರಾಜ್ ಆರ್, ನಿರ್ದೇಶಕ ಹರಿ ಸಂತು ನಟ ಚೇತನ್ ರಾಜ್ ಅತಿಥಿಗಳಾಗಿ ಆಗಮಿಸಿ, ಟ್ರೇಲರ್ ಲಾಂಚ್ ಮಾಡಿದರು. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ ಶುಭ ಕೋರಿದರು. ಈಗಾಗಲೇ ಆ್ಯಕ್ಟ್ 1978 ಸಿನಿಮಾ ಮತ್ತು ಅರಿಷಡ್ವರ್ಗ ಸೇರಿ ಹಲವು ಹೊಸ ಸಿನಿಮಾಗಳು ಚಿತ್ರಮಂದಿರದಲ್ಲಿವೆ. ಇದೀಗ ಆರ್.ಎಚ್ 100 ಸಿನಿಮಾ ಸಹ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.
ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಮಹೇಶ್, ಒಟ್ಟು 38 ದಿನಗಳ ಕಾಲ ಬೆಂಗಳೂರು ಮತ್ತು ಕೊಡಚಾದ್ರಿಯಲ್ಲಿ ಚಿತ್ರದ ಬಹುಪಾಲು ಶೂಟಿಂಗ್ ಮಾಡಿಕೊಂಡಿದ್ದೇವೆ. ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣ ಪತ್ರ ಸಿಕ್ಕಿದ್ದು, ಡಿ.18ರಂದು ಬಿಡುಗಡೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದೇವೆ’ ಎಂದರು. ‘ಆರ್.ಎಕ್ಸ್ 100’ ಗೊತ್ತು, ಈ ‘ಆರ್.ಎಚ್ 100’ ಎಂದರೇನು? ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ನಿರ್ದೇಶಕರು ಈ ವಿಷಯವನ್ನು ರಹಸ್ಯವಾಗಿಟ್ಟಿದ್ದು, ಚಿತ್ರಮಂದಿರಗಳಲ್ಲೇ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.
ಮನೋಜ್ ಹಾಗೂ ಸಿದ್ದು ಕೋಡಿಪುರ್ ಹಾಡುಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ. ಸೋಮಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸಂಜಿತ್ ಹೆಗ್ಡೆ, ಅನುರಾಧ ಭಟ್, ಸಿದ್ದಾರ್ಥ್ ಬೆಲ್ ಮನು ಅವರ ಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ. ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ ಹಾಗೂ ಕುಂಫ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಗಣೇಶ್, ಹರ್ಷ. ಚಿತ್ರ, ಕಾವ್ಯ, ಸೋಮ್ ಸುಹಿತ್ ಮುಂತಾದವರು ಚಿತ್ರದಲ್ಲಿದ್ದಾರೆ.
No Comment! Be the first one.