ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳು ಯಶಸ್ವಿಯಾಗಿರುವುದೆ ಹೆಚ್ಚು. ಅಂತಹ ವಭಿನ್ನ ಕಂಟೆಂಟ್ ನೊಂದಿಗೆ ಹೊಸತಂಡವೊಂದು ಮಾಡಿರುವ ಹೊಸ ಚಿತ್ರ “ರೈಡ್”. ಇತ್ತೀಚೆಗೆ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಯಿತು. ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ‘ಕೆರೆಭೇಟೆ’ ಚಿತ್ರದ ಖ್ಯಾತಿಯ ಗೌರಿಶಂಕರ್, ಚೇತನ್, ವೇಣು, ತಿಮ್ಮೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕ ಉಮಾಪತಿ ಚಿತ್ರ ಯಶಸ್ವಿ ಯಾಗಲಿ ಎಂದು ಹಾರೈಸಿದರು.
ರಾಮಕೃಷ್ಣ ರಾಮೋಹಳ್ಳಿ ಶ್ರೀವರಸಿದ್ದಿ ವಿನಾಯಕ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ನಾಯಕನಟನಾಗಿ ಚಿತ್ರರಂಗ ಪ್ರವೇಶ ಮಾಡಿಸುತ್ತಿದ್ದಾರೆ. ನೂತನ ಪ್ರತಿಭೆ ತನ್ವಿ “ರೈಡ್” ಚಿತ್ರದ ನಾಯಕಿ. ಯೂಟ್ಯೂಬರ್ ಆಗಿ ಹೆಸರು ಮಾಡಿರುವ ನೀರಜ್ ಕುಮಾರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಈವರೆಗೂ ಕೆಲವು ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ನನಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಇದೊಂದು ಥ್ರಿಲ್ಲರ್ ಕಥಾಹಂದರ ಹೊಂದಿರುವ, ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ. ಮನೆಯಲ್ಲಿ ಹಿರಿಯರನ್ನು ಮದುವೆಗೆ ಒಪ್ಪಿಸಿದ ಯುವಪ್ರೇಮಿಗಳು ಜಾಲಿ “ರೈಡ್” ಗೆ ಹೋಗುತ್ತಾರೆ. ಆ “ರೈಡ್” ನಲ್ಲಿ ಹಲವು ತಿರುವುಗಳಿರುತ್ತದೆ. ಇದೇ ಚಿತ್ರದ ಕಥಾಹಂದರ. ವೆಂಕಿ ಹಾಗೂ ತನ್ವಿ ನಾಯಕ – ನಾಯಕಿಯಾಗಿ, ನೀರಜ್ ಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದರು ನಿರ್ದೇಶಕ ಭಾನುತೇಜ.
ನಾನು ಮೂಲತಃ ಸಿವಿಲ್ ಎಂಜಿನಿಯರ್. ನಟ ಆಗಬೇಕೆಂಬುದು ನನ್ನ ಕನಸು. ಆ ಕನಸಿಗೆ ಆಸರೆಯಾದವರು ನನ್ನ ತಂದೆ ರಾಮಕೃಷ್ಣ ರಾಮೋಹಳ್ಳಿ. ಈ ಚಿತ್ರದಲ್ಲಿ ನಾನು ಯುವಪ್ರೇಮಿ. ಪ್ರೇಯಸಿಯ ಒತ್ತಾಯದ ಮೇಲೆ “ರೈಡ್” ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಕಥೆ ಎಂದರು ನಾಯಕ ವೆಂಕಿ(ವೆಂಕಟೇಶ್). ನನ್ನದು ಇದು ಮೊದಲ ಚಿತ್ರ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕಿ ತನ್ವಿ.
ಯೂಟ್ಯೂಬರ್ ಆಗಿ ಚಿತ್ರರಂದಲ್ಲಿ ಪರಿಚಿತನಾಗಿರುವ ನನಗೆ ನಟನಾಗಿ ಇದು ಮೊದಲ ಚಿತ್ರ. ನನ್ನ ಹೊಸಪಯಣಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ನೀರಜ್ ಕುಮಾರ್ ತಿಳಿಸಿದರು. ಹಾಡುಗಳ ಬಗ್ಗೆ ಮಾಹಿತಿ ನೀಡಿದ ಸಂಗೀತ ನಿರ್ದೇಶಕ ಸೆಂದಿಲ್ ಕುಮಾರ್, MRT music ಮೂಲಕ ಹಾಡುಗಳು ಬಿಡುಗಡೆಯಾಗಿದೆ ಎಂದರು.
No Comment! Be the first one.