ನಿರ್ದೇಶಕನಾಗಿ ಕನ್ನಡ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ ರಿಷಬ್ ಶೆಟ್ಟಿ, ಸದ್ಯ ಭರವಸೆಯ ನಾಯಕನಾಗುವತ್ತಾ ಸಾಗುತ್ತಿರುವುದು ಬಹಳಷ್ಟು ಮಂದಿಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟ ಹಾಗೆ ಹಾಗಿದೆ. ಸದ್ಯ ಅವರ ಬೆಲ್ ಬಾಟಂ ಸಿನಿಮಾ ಭರ್ಜರಿ ಯಶಸ್ಸನ್ನು ಕಾಣುತ್ತಿದ್ದು, ರಿಷಬ್ ಅಂಟಗೋನಿ ಶೆಟ್ಟಿಯಾಗಿ ಮತ್ತೆ ತೆರೆಯ ಮೇಲೆ ವಿಜೃಂಭಿಸಲಿದ್ದಾರೆ. ಹೌದು ಇಷ್ಟು ದಿನಗಳ ಕಾಲ ಡಿಟೆಕ್ಟೀವ್ ದಿವಾಕರನಾಗಿದ್ದ ರಿಷಬ್ ಶೆಟ್ಟಿ ಅಂಟಗೋನಿ ಶೆಟ್ಟಿಯಾಗಿ ಬಣ್ಣ ಬದಲಿಸಿದ್ದಾರೆ. ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಇದಾಗಿದ್ದು, ಈಗಾಗಲೇ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಟೈಟಲ್ ಕೇಳಿದಾಕ್ಷಣವೇ ಇದಾವುದಪ್ಪ ಟೈಟಲ್ ಹಿಂಗಿದೇ ಅಂತ ಕಣ್ಣು ಕಣ್ಣು ಬಿಡುವಂತಾಗಿದೆ.
ಅಂದಹಾಗೆ ಅಂಟಗೋನಿ ಶೆಟ್ಟಿ ಸಿನಿಮಾವನ್ನು ಸಮರ್ಥ ಕಡ್ಕೋಳ್ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ರಿಷಬ್ ಶೆಟ್ಟಿಯೇ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ 2004ರಿಂದ 2019ರವರೆಗೆ ನಡೆಯುವ ಸ್ಟೋರಿಯಾಗಿದೆಯಂತೆ. ಈಗಾಗಲೇ ಟೈಟಲ್ ಮೂಲಕ ಕುತೂಹಲ ಮೂಡಿಸಿರುವ ‘ಅಂಟಗೋನಿ ಶೆಟ್ಟಿ’ ಮುಂದಿನ ವರ್ಷ ಸೆಟ್ಟೇರಲಿದೆ. 2020 ಜನವರಿಯಲ್ಲಿ ಸಿನಿಮಾ ಪ್ರಾರಂಭವಾಗಲಿದೆಯಂತೆ.
No Comment! Be the first one.