ಈಗಾಗಲೇ ಪೋಸ್ಟ್ ಮೂಲಕವೇ ಕಿಚ್ಚು ಹತ್ತಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ರಾಬರ್ಟ್ ಚಿತ್ರದ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದ್ದು, ಮುಂದಿನ ತಿಂಗಳು ಮೇ 6 ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಅಂದೇ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಲಿದೆಯಂತೆ. ಐದು ದಿನಗಳ ಕಾಲ ಮೊದಲ ಶೆಡ್ಯೂಲ್ ಸಿಲಿಕಾನ್ ಸಿಟಿಯಲ್ಲೇ ನಡೆಯಲಿದೆ. ನಂತರ ಹೈದರಾಬಾದ್, ವಿಶಾಖಪಟ್ಟಣಂ, ಚೆನೈ ನಲ್ಲಿಯೂ ಚಿತ್ರದ ಚಿತ್ರೀಕರಣ ನಡೆಯಲಿದೆ.
ಚೌಕ ಸಿನಿಮಾದ ನಂತರ ತರುಣ್ ಮತ್ತು ದರ್ಶನ್ ಮತ್ತೆ ಜೊತೆಯಾಗಿದ್ದು, ಕೆಜಿಎಫ್ ಖ್ಯಾತಿಯ ಸಂಭಾಷಣೆಕಾರರಾದ ಚಂದ್ರಮೌಳಿ ಮತ್ತು ರಾಜಶೇಖರ್ ಕೆ ಎಲ್ ಅವರು ಈ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಛಾಯಾಗ್ರಾಹಕ ಸುಧಾಕರ್ ಜೈನ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಈ ಚಿತ್ರಕ್ಕೆ ವರ್ಕ್ ಮಾಡಲಿದ್ದಾರೆ. ಉಳಿದಂತೆ ತಾರಾಗಣದ ಆಯ್ಕೆ ಅಂತಿಮ ಹಂತದಲ್ಲಿದೆ.
No Comment! Be the first one.