‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ನಿನ್ನೆಯಷ್ಟೇ ಅದ್ದೂರಿಯಾಗಿ ಸೆಟ್ಟೇರಿದೆ. ಮಾಸ್ ಟೈಟಲ್ ಜೊತೆಗೆ, ಮಾಸ್ ಲುಕ್ನಲ್ಲೇ ದಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ನಾಯಕಿ ಯಾರಾಗ್ತಾರೆ..? ತಾರಾಗಣ ಹೇಗಿರುತ್ತೆ..? ಅನ್ನೋ ಕುತೂಹಲವಿತ್ತು. ಆದರೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ರಾಬರ್ಟ್ ಟೀಮ್ಗೆ ತೆಲುಗು ನಟ ಜಗಪತಿ ಬಾಬು ಎಂಟ್ರಿಯಾಗಿದ್ದಾರೆ.
ಈಗಾಗಲೇ ಬಚ್ಚನ್ ಚಿತ್ರದಲ್ಲಿ ಸುದೀಪ್ ಎದುರಾಳಿಯಾಗಿ ಮಿಂಚಿದ್ದ ಜಗಪತಿ ಬಾಬು ಜಾಗ್ವಾರ್ ನಲ್ಲಿಯೂ ನಟಿಸಿದ್ದರು. ಅದ್ಭುತ ನಟನೆಯಿಂದ ಕನ್ನಡಿಗರ ಮನಸ್ಸು ಗೆದ್ದಿರುವ ಜಗಪತಿ ಬಾಬು ಇದೀಗ ‘ರಾಬರ್ಟ್’ ಅಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ರಾಬರ್ಟ್ ನಲ್ಲಿ ಜಗಪತಿ ಬಾಬು ಅವರ ಪಾತ್ರ ಎಂತದ್ದು ಎಂಬುದಕ್ಕೆ ಮಾತ್ರ ಸದ್ಯಕ್ಕೆ ಉತ್ತರವಿಲ್ಲ.
No Comment! Be the first one.