ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷದಿಂದೀಚೆಗೆ ಒಂದಿಷ್ಟೂ ಬಿಡುವಿಲ್ಲದಂತೆ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೈಲಿ ಇನ್ನೂ ಒಂದೆರಡು ಚಿತ್ರಗಳು ಬಾಕಿ ಇರುವಾಗಲೇ ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿಯೂ ಹೊರ ಬಿದ್ದಿತ್ತು. ಆದರೆ ಎಲ್ಲ ತಯಾರಿ ಮುಗಿದರೂ ಟೈಟಲ್ ಮಾತ್ರ ಪಕ್ಕಾ ಆಗಿರಲಿಲ್ಲ.
ಆದರೀಗ ತರುಣ್ ಸುಧೀರ್ ಈ ಚಿತ್ರಕ್ಕೆ ಟೈಟಲ್ ಹುಡುಕಿದ್ದಾರೆ. ಈ ಚಿತ್ರಕ್ಕೆ ‘ರಾಬರ್ಟ್’ ಎಂಬ ಶೀರ್ಷಿಕೆ ನಿಗಧಿಯಾಗಿದೆ!
ಈ ಹಿಂದೆ ತರುಣ್ ಸುಧೀರ್ ಚೌಕ ಎಂಬ ಚಿತ್ರ ನಿರ್ದೇಶನ ಮಾಡಿದ್ದರಲ್ಲಾ? ಅದರ ಒಟ್ಟಾರೆ ಗೆಲುವಿನಲ್ಲಿ ದರ್ಶನ್ ಅವರು ಅಭಿನಯಿಸಿದ್ದ ರಾಬರ್ಟ್ ಎಂಬ ಪಾತ್ರದ ಪಾಲೂ ಪ್ರಧಾನವಾಗಿದ್ದದ್ದು ಸುಳ್ಳಲ್ಲ. ಆ ಪಾತ್ರ ಇಡೀ ಚಿತ್ರಕ್ಕೊಂದು ಖದರ್ ತಂದುಕೊಟ್ಟಿದ್ದೂ ನಿಜ. ಇದೀಗ ತರುಣ್ ಅದೇ ಪಾತ್ರದ ಹೆಸರನ್ನು ತಮ್ಮ ಮುಂದಿನ ಚಿತ್ರಕ್ಕೆ ಇಟ್ಟಿದ್ದಾರೆ.
ದರ್ಶನ್ ಅವರಿಗೂ ಕೂಡಾ ಈ ಶೀರ್ಷಿಕೆ ಮೆಚ್ಚುಗೆಯಾಗಿದೆಯಂತೆ. ಸದ್ಯ ಅವರು ಒಪ್ಪಿಕೊಂಡಿರುವ ಯಜಮಾನ ಮತ್ತು ಒಡೆಯ ಚಿತ್ರದ ಚಿತ್ರೀಕರಣವೆಲ್ಲ ಸಂಪೂರ್ಣವಾಗಿ ಮುಗಿದ ನಂತರ ದರ್ಶನ್ ರಾಬರ್ಟ್ ಆಗಿ ಅವತಾರವೆತ್ತಲಿದ್ದಾರೆ. ಹೆಚ್ಚೂ ಕಡಿಮೆ ಈ ವರ್ಷದ ಕೊನೆಯ ಹಂತದಲ್ಲಿ ರಾಬರ್ಟ್ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
#