ಹಾಲಿವುಡ್ ನಟ ಹಾಗೂ ಬಾಕ್ಸರ್ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಗೆ ಅಂತೂ ಕಂಕಣ ಭಾಗ್ಯ ಕೂಡಿ ಬಂದಿದೆ. ಹೌದು.. ಗಾಯಕಿ ಲಾರೆನ್ ಹಶಿಯಾನ್ ಅವರನ್ನು ಹವಾಲಿ ದ್ವೀಪದಲ್ಲಿ ರಾಕ್ ವಿವಾಹವಾಗಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ದಿ ಗೇಮ್ ಪ್ಲ್ಯಾನ್ ಸೆಟ್ ನಲ್ಲಿ ಭೇಟಿಯಾಗಿದ್ದ ಈ ಜೋಡಿ ಕಳೆದ 12 ವರ್ಷಗಳಿಂದಲೂ ಡೇಟಿಂಗ್ ನಲ್ಲಿದ್ದರು. ಮದುವೆಗೂ ಮುನ್ನವೇ ತಾಯಿಯಾಗಿದ್ದ ಹಶಿಯಾನ್ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು.
https://www.instagram.com/p/B1V-udZHb0n/?utm_source=ig_web_copy_link
ರಾಕ್ ಗೆ ಸದ್ಯ 47 ವರ್ಷ ವಯಸ್ಸಾಗಿದ್ದು, ಲಾರೆನ್ ಹಶಿಯಾನ್ ಗೆ 34 ವರ್ಷ ವಯಸ್ಸಾಗಿದೆ. ರಾಕ್ ಲಾರೆನ್ ಹಶಿಯಾನ್ ಭೇಟಿಗೆ ಮೊದಲು ನಿರ್ಮಾಪಕಿ ಡ್ಯಾನಿ ಗಾರ್ಸಿಯಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ 18 ವರ್ಷದ ಮಗಳೂ ಇದ್ದಳು. ಆದರೆ ಈ ಜೋಡಿ 2007ರಲ್ಲಿ ಬೇರೆಯಾಗಿತ್ತು. ಲಾರೆನ್ ಹಶಿಯಾನ್ ಜೊತೆಗೆ ವಿವಾಹ ಆದ ಫೋಟೋಗಳನ್ನು ಡ್ವೇನ್ ಜಾನ್ಸನ್ ತಮ್ಮ ಇನ್ಸ್ ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
No Comment! Be the first one.