ನಾನು ಮದುವೆ ಆಗಿಲ್ಲ ಎಂದೇ ಸಾಕಷ್ಟು ಪೂಸಿ ಹೊಡೆದಿದ್ದ ರಾಖಿ ಸಾವಂತ್ ಹೌದು.. ನಾನು ಮದುವೆಯಾಗಿದ್ದೇನೆ ಎಂದು ಅಧಿಕೃತವಾಗಿ ಹೇಳಿಕೆಯನ್ನು ಕೊಟ್ಟಿದ್ದರು. ಹೇಳಿಕೆಕೊಟ್ಟು ಕೆಲ ದಿನಗಳು ಕಳೆಯುವಷ್ಟರಲ್ಲಿಯೇ ರಾಖಿ ಸಾವಂತ್ ಸದ್ದಿಲ್ಲದೇ ಮಧುಚಂದ್ರಕ್ಕೂ ಹೊರಟುಬಿಟ್ಟಿದ್ದಾರೆ. ಯುಕೆ ಮೂಲದ ಅನಿವಾಸಿ ಭಾರತೀಯ ರಿತೇಶ್ ಅವರನ್ನು ವರಿಸಿರುವ ರಾಖಿ ಸಾವಂತ್ ಹನಿಮೂನ್ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಎಲ್ಲಿಯೂ ಗಂಡನೊಟ್ಟಿಗೆ ನಿಲ್ಲದೇ ತಾನೇ ವಿಭಿನ್ನ ವಿಭಿನ್ನ ಭಂಗಿಯಲ್ಲಿ ಫೋಸ್ ಕೊಟ್ಟಿರೋದು ಕೂಡ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ. ಮೇ ಬಿ ಫೊಟೋವನ್ನು ಗಂಡನೇ ತೆಗೆದಿರಬೇಕು ಅಲ್ಲವೇ…
ಮುಖ್ಯವಾಗಿ ಬಾತ್ ಟಬ್ನಲ್ಲಿ ನೊರೆ ಎಬ್ಬಿಸಿ ನೀಡಿರುವ ಫೋಟೋಗಳು ಮಾತ್ರ ಎಲ್ಲರ ಗಮನಸೆಳೆದಿವೆ. ತುಂಡುಡುಗೆ, ಹಣೆಗೆ ಕುಂಕುಮ, ಕೊರಳಿಗೆ ಮಾಂಗಲ್ಯ ಧರಿಸಿರುವ ಫೋಟೋಗಳನ್ನು ರಾಖಿ ಹಂಚಿಕೊಂಡಿದ್ದಾರೆ. ಈ ಹಿಂದೆ ತನ್ನ ಮದುವೆಯ ಕುರಿತು ಮಾತನಾಡಿದ್ದ ರಾಖಿ “ನನಗೆ ತುಂಬಾ ಭಯವಾಯಿತು. ನಾನು ಮದುವೆಯಾಗಿದ್ದೇನೆ. ನನ್ನ ಗಂಡನ ಹೆಸರು ರಿತೇಷ್. ಅವರದು ಯುಕೆ. ಮದುವೆ ಬಳಿಕ ಅವರು ಯುಕೆ ಹೊರಟು ಹೋಗಿದ್ದಾರೆ. ನನ್ನ ವೀಸಾ ಬರಬೇಕಿದೆ. ಆ ಪ್ರಕ್ರಿಯೆ ಮುಗಿದ ಬಳಿಕ ನಾನು ಅವರ ಬಳಿಗೆ ಹೋಗುತ್ತೇನೆ. ಅಲ್ಲೇ ನೆಲೆಗೊಳ್ಳುತ್ತೇನೆ” ಎಂದು ಗೊಂದಲದ ಹೇಳಿಕೆಯನ್ನು ನೀಡಿದ್ದರು.