ಯಾವ ಪಾತ್ರಕ್ಕಾದರೂ ಒಗ್ಗಿಕೊಳ್ಳುವ ಪ್ರತಿಭೆ ಹೊಂದಿರೋ ಲವಲವಿಕೆಯ ನಾಯಕನೊಬ್ಬ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕ್ಷಣಗಣನೆ ಶುರುವಾಗಿದೆ. ಫೇಸ್ ಟು ಫೇಸ್ ಚಿತ್ರದ ಮೂಲಕ ಮೊದಲ ಸಲ ನಾಯಕನಾಗಿ ಹೊರ ಹೊಮ್ಮುತ್ತಿರುವ ರೋಹಿತ್ ಭಾನುಪ್ರಕಾಶ್ ನಿರ್ವಹಿಸಿರೋ ಪಾತ್ರದ ಖದರ್ರೇ ಅಂಥಾದ್ದಿದೆ.ಸಂದೀಪ್ ಜನಾರ್ಧನ್ ನಿರ್ದೇಶನ ಮಾಡಿರೋ ಫೇಸ್ ಟು ಫೇಸ್ ಇದೇ ಮಾರ್ಚ್ 15ರಂದು ತೆರೆ ಕಾಣುತ್ತಿದೆ. ವಿಶಿಷ್ಟವಾದ ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರೋಹಿತ್ ಈಗಿನ ಜನರೇಷನ್ ಹುಡುಗರ ಪ್ರಾತಿನಿಧಿಕ ಪಾತ್ರಕ್ಕೆ ಜೀವ ತುಂಬಿದ್ದಾರೆ.
ರೋಹಿತ್ ಈ ಹಿಂದೆ ರವಿಚಂದ್ರನ್ ಅಭಿನಯದ ದೃಷ್ಯ ಚಿತ್ರದಲ್ಲಿ ಖಳನಾಗಿ ಅಬ್ಬರಿಸಿದ್ದವರು. ಆ ನಂತರವೂ ಹಲವಾರು ಚಿತ್ರಗಳಲ್ಲಿ ನಟಿಸಿ ಗುರುತಾಗಿದ್ದರು. ಪ್ರೋ ಕಬಡ್ಡಿ ಪಂದ್ಯಾಟದ ಕಾಮೆಂಟರಿಗೂ ಧ್ವನಿಯಾಗುತ್ತಾ ಮತ್ತೊಂದೆಡೆ ಹೊಟೆಲ್ ವ್ಯವಹಾರವನ್ನೂ ನಡೆಸುತ್ತಿರೋ ಅವರ ಪಾಲಿಗೆ ನಟನೆ ಪ್ರಧಾನ ಗುರಿ. ಹಲವಾರು ವರ್ಷಗಳಿಂದ ನಾಯಕ ನಟನಾಗಬೇಕೆಂಬ ಹಂಬಲ ಹೊಂದಿ, ಹಂತ ಹಂತವಾಗಿ ಬೆಳೆದು ಬಂದಿರೋ ಅವರೀಗ ಫೇಸ್ ಟು ಫೇಸ್ ಮೂಲಕ ನಾಯಕನಾಗೋ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಪೂರ್ವಿ ಜೋಷಿ ಮತ್ತು ಹುಲಿರಾಯ ಖ್ಯಾತಿಯ ದಿವ್ಯಾ ಉರುಡಗ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಇವರೆಲ್ಲರ ಪಾತ್ರಗಳನ್ನೂ ಕೂಡಾ ಭಿನ್ನವಾಗಿಯೇ ಸಂದೀಪ್ ಕಟ್ಟಿ ಕೊಟ್ಟಿದ್ದಾರಂತೆ. ಟ್ರೈಲರ್ ಮೂಲಕವೇ ಎಲ್ಲರ ಕುತೂಹಲಕ್ಕೆ ಕಾರಣವಾಗಿರೋ ಈ ಚಿತ್ರ ಥೇಟರಿಗೆ ಬರಲು ದಿನಗಣನೆ ಆರಂಭವಾಗಿದೆ.
No Comment! Be the first one.