ರೂಮ್ ಬಾಯ್… ಈ ಹೆಸರಿನಲ್ಲೊಂದು ಸಿನಿಮಾ ಬರ್ತಿರೋದು ಗೊತ್ತಿರುವ ವಿಷ್ಯ.. ಒಂದಷ್ಟು ಪ್ರತಿಭಾನ್ವಿತರ ತಂಡದ ಪರಿಶ್ರಮದ ರೂಮ್ ಬಾಯ್ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಇವತ್ತು ರೂಮ್ ಬಾಯ್ ಸಿನಿಮಾದ ಟೀಸರ್ ರಿಲೀಸ್ ಮಾಡಿ, ಯುವಪ್ರತಿಭೆಗಳ ಕಾರ್ಯಕ್ಕೆ ಬೆನ್ನುತಟ್ಟಿದ್ದಾರೆ.

ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ 10ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ರವಿ ನಾಗಡದಿನ್ನಿ ನಿರ್ದೇಶನದ ಚೊಚ್ಚಲ ಸಿನಿಮಾ ರೂಮ್ ಬಾಯ್. ಈ ಹಿಂದೆ ಅಪರೇಷನ್ ನಕ್ಷತ್ರ, ಲೈಫ್ ಸೂಪರ್, ಗ್ರಾಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿಲ್ ಸೂರ್ಯ ಹೀರೋ ಆಗಿ ರೂಮ್ ಬಾಯ್ ಸಿನಿಮಾದಲ್ಲಿ ನಟಿಸಿದ್ದು, ಜೊತೆಗೆ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಲಿಖಿತ್ ಸೂರ್ಯಗೆ ಜೋಡಿಯಾಗಿ ರಕ್ಷಾ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಒಂದಷ್ಟು ತಾರಾಗಣ ಸಿನಿಮಾದಲ್ಲಿದೆ.

ಸೈಕಾಲಾಜಿಕಲ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ರೂಮ್ ಬಾಯ್ ಸಿನಿಮಾದಲ್ಲಿ ಧನಪಾಲ್ ನಾಯಕ್ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್ ಮ್ಯೂಸಿಕ್ ಇದ್ದು, ಉಳಿದಂತೆ ಕಿಯೇಟಿವ್ ಹೆಡ್ ಆಗಿ ಹಿರಿಯ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ್ ಕೆಲಸ ನಿರ್ವಹಿಸಿದ್ದು, ಐ ಕಾನ್ ಪ್ರೊಡಕ್ಷನ್ ನಡಿ ಲಿಖಿತ್ ಸೂರ್ಯ ಸಿನಿಮಾಗೆ ಹಣ ಹಾಕಿದ್ದು, ಸದ್ಯ ಶೂಟಿಂಗ್ ಮುಗಿಸಿ ಎಪ್ರಿಲ್ ಅಥವಾ ಮೇನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ರೂಮ್ ಬಾಯ್ ತಂಡ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಭಾನುವಾರದ‌ ಮಹಾ ಮನರಂಜನೆ :  ಸುವರ್ಣ ಕಾಮಿಡಿ ಉತ್ಸವ

Previous article

ಪಪ್ಪೆಟ್ಸ್ & ದಿ ಕ್ರಿಟಿಕ್….

Next article

You may also like

Comments

Leave a reply

Your email address will not be published.