ಧನುಷ್ ಮತ್ತು ಸಾಯಿ ಪಲ್ಲವಿ ಜೋಡಿಯ ’ಮಾರಿ 2’ ಚಿತ್ರದ ಹಾಡು ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಈ ಲಿರಿಕಲ್ ಹಾಡಿಗೆ 66 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. ನಂತರ ಜನವರಿ 2 ರಂದು ಬಿಡುಗಡೆಯಾದ ವಿಡಿಯೋ ಇದೀಗ ದಾಖಲೆಯ ವೀಕ್ಷಣೆ ಪಡೆದು ಮುನ್ನುಗ್ಗಿದೆ. ಇದೀಗ ಹಾಡು 200 ಮಿಲಿಯನ್ ವೀಕ್ಷಣೆ ಪಡೆದಿದ್ದು, ಇದು ದಕ್ಷಿಣ ಭಾರತ ಸಿನಿಮಾರಂಗದಲ್ಲೇ ಹೊಸ ದಾಖಲೆ. ಇದಕ್ಕೂ ಮುನ್ನ ಸಾಯಿ ಪಲ್ಲವಿ ಅಭಿನಯದ ’ಫಿದಾ’ ಚಿತ್ರದ ’ವಚ್ಚಿಂದೇ’ ಹಾಡು ಅತ್ಯಧಿಕ ವೀಕ್ಷಣೆ ಪಡೆದಿತ್ತು. ಈಗ ಸಾಯಿ ಪಲ್ಲವಿ ಅವರದ್ದೇ ’ರೌಡಿ ಬೇಬಿ’ ಈ ದಾಖಲೆ ಮುರಿದಿರುವುದು ವಿಶೇಷ.
ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆಯ ಈ ಹಾಡಿಗೆ ಧನುಷ್ ಮತ್ತು ಸಾಯಿ ಪಲ್ಲವಿ ಆಕರ್ಷಕವಾಗಿ ಕುಣಿದಿದ್ದಾರೆ. ವಿಶೇಷವೆಂದರೆ ಸ್ವತಃ ಧನುಷ್ ರಚಿಸಿ, ಹಾಡಿರುವ ಸಾಂಗ್ ಇದು. ನೃತ್ಯ ಸಂಯೋಜನೆ ನಟ, ನಿರ್ದೇಶಕ ಪ್ರಭುದೇವ ಅವರದು. ಈ ಹಿಂದೆ ಕಾಲಿವುಡ್ನಲ್ಲಿ ಧನುಷ್ ಅವರ ’ಕೊಲವರಿ ಡಿ’ ಹಾಡು 175 ಮಿಲಿಯನ್ ವೀಕ್ಷಣೆ ಪಡೆದಿತ್ತು. ಈ ವಿಶಿಷ್ಟ ದಾಖಲೆಯ ಬಗ್ಗೆ ನಟ ಧನುಷ್ ಮಾತನಾಡಿ, ನೃತ್ಯ ಸಂಯೋಜಿಸಿದ ಪ್ರಭುದೇವ, ಸಂಗೀತ ಸಂಯೋಜಕ ಯುವನ್ ಶಂಕರ್ ರಾಜಾ, ಗಾಯಕಿ ಧೀ ಹಾಗೂ ಎಲ್ಲಾ ಸಹ ನೃತ್ಯತಾರೆಯರಿಗೂ ಧನ್ಯವಾದಗಳು ಎಂದಿದ್ದಾರೆ.
https://youtu.be/x6Q7c9RyMzk #
No Comment! Be the first one.