ಎಲ್ಲಾ ಹೀರೋಗಳೂ ವರ್ಷಕ್ಕೆ, ಎರಡು ವರ್ಷಕ್ಕೆ ಒಂದೊಂದು ಸಿನಿಮಾಗಳನ್ನು ಮಾಡುವ ಸಂಪ್ರದಾಯ ಆರಂಭಿಸಿಕೊಂಡಿದ್ದಾರೆ. ಆದರೆ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಾತ್ರ ಏಕಕಾಲಕ್ಕೆ ಮೂರ‍್ನಾಲ್ಕು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶಿವಣ್ಣನ ಮುಂದೆ ಸದಾ ನಾಲ್ಕಾರು ಸಿನಿಮಾಗಳು ಸಾಲುಗಟ್ಟಿ ನಿಂತೇ ಇರುತ್ತವೆ. ವಿಶೇಷವೆಂದರೆ, ಕಳೆದ ಮೂರು ವರ್ಷಗಳಿಂದ ‘ಕಿಸ್’ ಸಿನಿಮಾದ ತಯಾರಿಗೆ ಇಳಿದು ಅತ್ತಿತ್ತ ಕದಲದೇ ಇದ್ದ ನಿರ್ದೇಶಕ ಎ.ಪಿ.ಅರ್ಜುನ್ ಶಿವಣ್ಣನಿಗಾಗಿ ಸಿನಿಮಾವೊಂದನ್ನು ಆರಂಭಿಸಲಿದ್ದಾರೆ. ಈ ಚಿತ್ರಕ್ಕೆ ‘ರಾಯಲ್ ಇನ್ ಫೀಲ್ಡ್’ ಅನ್ನೋ ಹೆಸರನ್ನೂ ಇಟ್ಟಿದ್ದಾರೆ!
ಸದ್ಯ ಶಿವಣ್ಣ ದ್ರೋಣ, ಎಸ್.ಆರ್.ಕೆ., ಆಯುಶ್ಮಾನ್‌ಭವ ಮತ್ತು ಭಜರಂಗಿ-೨ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಾಲ್ಕು ತಿಂಗಳು ಕಳೆಯುತ್ತಿದ್ದಂತೇ ಶಿವಣ್ಣ ಮತ್ತು ಅರ್ಜುನ್ ಕಾಂಬಿನೇಷನ್ನಿನ ‘ರಾಯಲ್’ ಆರಂಭವಾಗಲಿದೆ. ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಅಥವಾ ನಿರ್ದೇಶಕರಾಗಬಹುಸುವ ಬಹುತೇಕ ಯಂಗ್ ಡೈರೆಕ್ಟರುಗಳನ್ನು ‘ಯಾರಿಗಾಗಿ ಸಿನಿಮಾ ಮಾಡಬೇಕೆನ್ನುವುದು ನಿಮ್ಮ ಕನಸು?’ ಅಂತಾ ಕೇಳಿದರೆ, ಥಟ್ಟನೆ ಬರುವ ಉತ್ತರ ‘ಶಿವಣ್ಣನಿಗಾಗಿ’ ಅನ್ನೋದು!
ಇಪ್ಪತ್ಮೂರು ವರ್ಷದ ಎಳೇ ವಯಸ್ಸಿಗೇ ನಿರ್ದೇಶಕನಾಗಿ ತಾನೂ ಗೆಲ್ಲುತ್ತಾ, ತನ್ನನ್ನು ನಂಬಿದ ಹೊಸಬರಿಗೂ ಒಳ್ಳೊಳ್ಳೆ ಸ್ಥಾನ ದಕ್ಕುವಂತೆ ಮಾಡಿದವರು ಅರ್ಜುನ್. ಜೊತೆಗೆ ದರ್ಶನ್‌ರಂಥಾ ಸ್ಟಾರ್’ಗೂ ಚಿತ್ರ ನಿರ್ದೇಶಿಸಿದವರು. ಕಿಸ್ ಸಿನಿಮಾದ ಮೂಲಕ ವಿರಾಟ್ ಮತ್ತು ಶ್ರೀಲೀಲಾ ಎಂಬ ತೀರಾ ಫ್ರೆಶ್ ಎನಿಸುವ, ಮುದ್ದುಮುದ್ದಾದ ಜೋಡಿಯನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಖು ಕಿಸ್ ವಿಶಾಲವಾದ ತೆರೆಮೇಲೆ ಅರಳಿಕೊಳ್ಳಲಿದೆ. ಅದಾಗುತ್ತಿದ್ದಂತೇ ಅರ್ಜುನ್ ಶಿವಣ್ಣನ ‘ರಾಯಲ್’ಗಾಗಿ ಕಾರ್ಯಾರಂಭ ಮಾಡಲಿದ್ದಾರೆ.
ರಾಯಲ್ ಇನ್ ಫೀಲ್ಡ್ – ಈ ಹೆಸರು ಕೇಳುತ್ತಿದ್ದಂತೇ, ಇದು ಶಿವಣ್ಣನಿಗೆಂದೇ ಸೃಷ್ಟಿಸಿದ ಶೀರ್ಷಿಕೆ ಅನ್ನೋದು ಗೊತ್ತಾಗುತ್ತದೆ. ‘ಇನ್ ಫೀಲ್ಡ್’ ಅನ್ನೋ ಲೈನು ನೋಡಿದರೆ, ಮೇಲ್ನೋಟಕ್ಕೆ ಇದೊಂದು ರೌಡಿಸಂ ಸಬ್ಜೆಕ್ಟಾ ಅನ್ನೋ ಅನುಮಾನ ಹುಟ್ಟಿಸುವಂತಿದೆ. ಶಿವಣ್ಣ ಈ ಸಿನಿಮಾದಲ್ಲಿ ಡಿಫರೆಂಟಾದ ಶೇಡುಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ೭೦ವರ್ಷದ ವಯೋವೃದ್ಧನಾಗಿಯೂ ಶಿವಣ್ಣ ಈ ಚಿತ್ರದಲ್ಲಿ ಅವತಾರವೆತ್ತುತ್ತಾರೆ ಎನ್ನಲಾಗುತ್ತಿದೆ. ಅರ್ಜುನ್ ಮೊದಲ ಸಿನಿಮಾದಿಂದಲೂ ಭಿನ್ನ ಹೆಸರುಗಳನ್ನೇ ತಮ್ಮ ಸಿನಿಮಾಗಳ ಶೀರ್ಷಿಕೆಗಳನ್ನಾಗಿಸಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ಯಾರೂ ಅಷ್ಟು ಸುಲಭಕ್ಕೆ ಅಂದಾಜು ಮಾಡಲಾಗದಂಥಾ ಕಥಾವಸ್ತುಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನೋಡಿದರೆ ಶಿವಣ್ಣನಿಗಾಗಿ ಅರ್ಜುನ್ ರೂಪಿಸಲಿರುವ ‘ರಾಯಲ್’ ಸಿನಿಮಾ ಫೀಲ್ಡಿನಲ್ಲಿ ಹೊಸ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ. ಅದು ನಿಜವಾಗಲಿ…
CG ARUN

ಇದು ಭುವನ್ ಗೆಲುವು!

Previous article

ಎಲ್ಲಿದ್ರು ಇಲ್ಲಿತನಕ ಎನ್ನುವಂತಾಗಬಹುದು!

Next article

You may also like

Comments

Leave a reply

Your email address will not be published. Required fields are marked *