ರಾಜಮೌಳಿ ಸಿನಿಮಾವೆಂದರೆ ಅಲ್ಲಿ ದುಬಾರಿ, ರಾಯಲ್ಲು, ವೈಭವವೆಂಬುದು ನಿರೀಕ್ಷೆಗೂ ಮೀರಿ ಹೆಚ್ಚಾಗಿರುವಂತದ್ದು. ಅದು ಬಾಹುಬಲಿ, ಮಗದೀಗ ಸಿನಿಮಾಗಳ ಮೂಲಕ ಈಗಾಗಲೇ ಪ್ರೂವ್ ಕೂಡ ಆಗಿದೆ. ಇದೀಗ ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಕೂಡ ಅದೇ ಹಾದಿಯಲ್ಲಿದೆ. ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುವ ಆರ್ ಆರ್ ಆರ್ ಸಿನಿಮಾ ಸದ್ಯ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.
ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಡುವಿನ ಆ್ಯಕ್ಷನ್ ಸನ್ನಿವೇಶಕ್ಕೆ ಬರೋಬ್ಬರಿ 45 ಕೋಟಿ ಖರ್ಚು ಮಾಡಲಾಗುತ್ತಿದೆಯೆನ್ನುವ ಲೇಟೆಸ್ಟ್ ವಿಚಾರ ರಿವೀಲ್ ಆಗಿದ್ದು, ಅರೇ ಬರೀ ಫೈಟಿಂಗ್ ಸೀನಿಗೆ ಅಷ್ಟೊಂದು ಬಂಡವಾಳವಾದರೆ ಮತ್ತೂ ಪೂರಾ ಸಿನಿಮಾಕ್ಕೆ ಎಷ್ಟಿರಬಹುದೆಂದು ಸಿನಿ ಪಂಡಿತರು ಲೆಕ್ಕಾಚಾರ ಮಾಡುವಂತಾಗಿದೆ. ಈ ಆ್ಯಕ್ಷನ್ ಸನ್ನಿವೇಶದಲ್ಲಿ ರಾಮ್ ಚರಣ್, ಜೂನಿಯರ್ ಎನ್ ಟಿ ಆರ್ ಸೇರಿದಂತೆ ಎರಡು ಸಾವಿರ ಮಂದಿ ಭಾಗಿಯಾಗಲಿದ್ದಾರಂತೆ. ಸದ್ಯದಲ್ಲೇ ಫೈಟಿಂಗ್ ಸೀನಿನ ಶೂಟಿಂಗ್ ನಡೆಸಲಾಗುವುದೆಂದು ಮೂಲಗಳಿಂದ ತಿಳಿದುಬಂದಿದೆ. ಈ ಪಿರಿಯಾಡಿಕ್ ಆ್ಯಕ್ಷನ್ ಡ್ರಾಮಾ ಸಿನಿಮಾವನ್ನು ಮುಂದಿನ ವರ್ಷ ಜುಲೈ 30ಕ್ಕೆ ತೆರೆಗೆ ತರುವ ಯೋಜನೆಯಲ್ಲಿ ರಾಜಮೌಳಿ ಇದ್ದಾರೆ.
No Comment! Be the first one.