ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಜೂ. ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ್ ಇಬ್ಬರು ನಾಯಕರು ಅಭಿನಯಿಸುತ್ತಿದ್ದಾರೆ. ಈ ಪೈಕಿ ರಾಮ್ ಚರಣ್ ತೇಜ್ ಗೆ ಆಲಿಯಾ ಭಟ್ ನಾಯಕಿಯಾಗಿ ನಟಿಸುವುದು ನಿಕ್ಕಿಯಾಗಿದೆ. ಆದರೆ ಜೂ ಎನ್. ಟಿ. ಆರ್ ಗೆ ನಾಯಕಿಯರೇ ಆಗಿಬರುತ್ತಿಲ್ಲ.
ಈ ಮೊದಲು ನಾಯಕಿಯಾಗಿದ್ದ ಹಾಲಿವುಡ್ ಸ್ಟಾರ್ ಡೈಸಿ ಎಡ್ಗರ್ ಸಹ ಕಾರಣಾಂತರಗಳಿಂದ ಆರ್ ಆರ್ ಆರ್ ನಿಂದ ಹೊರಬಂದಿದ್ದರು. ಅದಾದ ಮೇಲೆ ಪರಿಣಿತಿ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಇದೀಗ ಪರಿಣಿತಿ ಚೋಪ್ರಾರ ಬದಲಾಗಿ ಪ್ರೇಮಂ ನಾಯಕಿ ಸಾಯಿ ಪಲ್ಲವಿಯ ಹೆಸರು ಕೇಳಿಬರುತ್ತಿದೆ. ಆದರೆ ಎಲ್ಲವೂ ಗಾಳಿ ಸುದ್ದಿಯಾಗಿದ್ದು, ಈ ಕುರಿತು ಚಿತ್ರತಂಡವು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಫೈನಲ್ ಆಗಿದ್ದೇ ಆದರೆ ರೌಡಿ ಬೇಬಿ ಮತ್ತಷ್ಟು ಮಿಂಚುವುದರಲ್ಲಿ ಅನುಮಾನವಿಲ್ಲ.
No Comment! Be the first one.