ಮರಿಟೈಗರ್ ವಿನೋದ್ ಪ್ರಭಾಕರ್ ನಟಿಸಿರೋ ರಗಡ್ ಚಿತ್ರ ಈ ವಾರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಈಗಾಗಲೇ ವಿನೋದ್ ಅವರ ವೃತ್ತಿ ಬದುಕಿಗೆ ಈ ಚಿತ್ರ ಹೊಸಾ ಆಯಾಮವನ್ನೇ ಕೊಡುತ್ತೆ ಅನ್ನೋ ಮಾತೂ ಎಲ್ಲಡೆ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹಾಡುಗಳಂತೂ ರಗಡ್ ಬಗೆಗಿನ ನಿರೀಕ್ಷೆ ಬಿಗಡಾಯಿಸುವಂತೆ ಮಾಡಿಬಿಟ್ಟಿದೆ!
ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಮಾಡಿರೋ ರಗಡ್ ಹಾಡುಗಳೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿವೆ. ನವಿರಾದ ಹಾಡುಗಳ ಮೂಲಕವೇ ಪ್ರಸಿದ್ಧಿ ಪಡೆದಿದ್ದ ಅಭಿಮಾನ್ ರಾಯ್ ಬಹು ಕಾಲದ ನಂತರ ಮತ್ತೆ ಫಾರ್ಮಿಗೆ ಮರಳಿದ್ದಾರೆ. ಅವರನ್ನು ಮತ್ತೆ ಬ್ಯುಸಿಯಾಗಿಸುವ ಮಾಧುರ್ಯದೊಂದಿಗೆ ಈ ಹಾಡುಗಳೆಲ್ಲವೂ ಮೂಡಿ ಬಂದಿವೆ. ಎಲ್ಲೆಡೆಯಿಂದ ಈ ಹಾಡುಗಳ ಬಗ್ಗೆ ಮೆಚ್ಚುಗೆ ಕೇಳಿ ಬರುತ್ತಿರೋ ಹೊತ್ತಿನಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಈ ಬಗ್ಗೆ ಮಾತಾಡಿದ್ದಾರೆ.
ದರ್ಶನ್ ಅವರು ರಗಡ್ ಚಿತ್ರದ ಎಲ್ಲ ಹಾಡುಗಳನ್ನೂ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಹಾಡುಗಳೂ ಚೆಂದಗೆ ಮೂಡಿ ಬಂದಿವೆ ಅಂದಿರೋ ದರ್ಶನ್ ಮೆಲೋಡಿ ಹಾಡೊಂದನ್ನಂತೂ ಹಾಡಿ ಹೊಗಳಿದ್ದಾರೆ. ಈ ಹಾಡು ರೊಮ್ಯಾಂಟಿಕ್ ಹಾಡು ಮಾಧುರ್ಯದಿಂದ ಮೂಡಿ ಬಂದಿರೋದರ ಜೊತೆಗೇ ಚಿಕ್ಕಮಗಳೂರಿನ ಸುಂದರ ಲೊಕೇಶನ್ನುಗಳ ಮೂಲಕವೂ ಅಚ್ಚರಿ ಹುಟ್ಟಿಸಿದೆ. ನಮ್ಮ ಚಿಕ್ಕಮಗಳೂರಿನಲ್ಲಿ ಇಂಥಾ ಲೊಕೇಷನ್ನುಗಳಿವೆಯಾ ಎಂಬ ಅಚ್ಚರಿ ಹುಟ್ಟಿಸುವಂತೆ ಈ ಹಾಡು ಮೂಡಿ ಬಂದಿದೆ. ಇದರ ಹಿಂದಿರೋ ಪರಿಶ್ರಮವೂ ಎದ್ದು ಕಾಣಿಸುತ್ತಿದೆ. ಈ ಚಿತ್ರಕ್ಕೆ ಶುವಾಗಲಿ ಅಂತ ದರ್ಶನ್ ಅವರು ಹಾರೈಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿನೋದ್ ಪ್ರಭಾಕರ್ ಗೆಳೆಯ. ಆರಂಭ ಕಾಲದಿಂದಲೂ ವಿನೋದ್ ಅವರದ್ದೊಂದು ಚಿತ್ರ ಬರುತ್ತಿದೆ ಎಂದರೆ ತಮ್ಮ ಚಿತ್ರಕ್ಕಿಂತಲೂ ಹೆಚ್ಚಿನ ಕಾಳಜಿಯನ್ನು ದರ್ಶನ್ ವಹಿಸುತ್ತಾ ಬಂದಿದ್ದಾರೆ. ರಗಡ್ ಬಗೆಗೂ ಅವರು ಅಂಥಾದ್ದೇ ಕಾಳಜಿ ಮತ್ತು ಗೆದ್ದೇ ಗೆಲ್ಲುತ್ತದೆಂಬ ಭರವಸೆಯನ್ನೂ ಹೊಂದಿದ್ದಾರೆ.
No Comment! Be the first one.