ರುಸ್ತುಂ ಈಗಾಗಲೇ ಟೀಸರ್ ಮತ್ತು ಲಿರಿಕಲ್ ಹಾಡುಗಳಿಂದ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಸಾಹಸ ನಿರ್ದೇಶಕ ರವಿವರ್ಮ ಕಾಂಬಿನೇಷನ್ನಿನ ಸಿನಿಮಾ ಇದಾಗಿದೆ. ಸದ್ಯ ರುಸ್ತುಂ ಚಿತ್ರತಂಡ ಭಲೇ ಭಲೇ ಎನ್ನುವ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್ ಮಾಡಿದೆ.
ಇದೊಂದು ಪಕ್ಕಾ ಮಾಸ್ ಟಪ್ಪಾಂಗುಚ್ಚಿ ಹಾಡಾಗಿದ್ದು, ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದಾರೆ. ಪೋಲೀಸ್ ಕಾಸ್ಟ್ಯುಮ್ನಲ್ಲಿ ಗನ್ ಹಿಡಿದು ಮಿಂಚಿದ್ದಾರೆ. ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿದ್ದು ವ್ಯಾಸರಾಜ್ ಸೋಸ್ಲೆ ಹಾಡಿಗೆ ದನಿಯಾಗಿದ್ದಾರೆ.
No Comment! Be the first one.