ನಿರ್ದೇಶಕ ಎಸ್ ನಾರಾಯಣ್ ತಾಯಿ ಕಮಲಮ್ಮ ನಿಧನರಾಗಿದ್ದಾರೆ. ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದ ಅವರಿಗೆ ಭದ್ರಾವತಿಯ ಆಸ್ಪತ್ರೆಯಲ್ಲಿಯೇ ಬಹು ಕಾಲದಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕಮಲಮ್ಮ ನಿಧನರಾಗಿದ್ದಾರೆ.
ಭದ್ರಾವತಿಯ ಗಾಂಧಿನಗರದಲ್ಲಿರುವ ನಿವಾಸದಲ್ಲಿಯೇ ಕಮಲಮ್ಮ ವಾಸವಿದ್ದರು. ನೆನ್ನೆ ಅದೇ ನಿವಾಸದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಬಳಿಕ ಸಂಜೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಎಸ್ ನಾರಾಯಣ್ ಅವರ ಎಲ್ಲ ಸಾಧನೆಗಳ ಹಿಂದಿನ ಶಕ್ತಿಯಂತಿದ್ದವರು ಕಮಲಮ್ಮ. ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ನಾರಾಯಣ್ ಅವರಿಚ್ಚೆಯಂತೆಯೇ ಭದ್ರಾವತಿಯ ನಿವಾಸದಲ್ಲಿಯೇ ಇರುವ ವ್ಯವಸ್ಥೆ ಮಾಡಿಸಿದ್ದರು. ಕಾಲ ಕಾಲಕ್ಕೆ ತಾಯಿಯ ಯೋಗಕ್ಷೇಮ ವಿಚಾರಿಸಿಕೊಂಡೂ ಬರುತ್ತಿದ್ದರು. ಆದರೆ ಈಗ್ಗೆ ತಿಂಗಳ ಹಿಂದೆ ಕಮಲಮ್ಮನವರ ಅನಾರೋಗ್ಯ ಉಲ್ಬಣಿಸಿತ್ತು. ಅದರಿಂದಲೇ ಅವರು ಮರಣ ಹೊಂದಿದ್ದಾರೆ.
#
No Comment! Be the first one.