ದೇವರಾಜ್ ಎರಡನೇ ಪುತ್ರ ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಇತ್ತೀಚೆಗೆ ಅನೌನ್ಸ್ ಆದ, ಪ್ರಣಂ ನಟನೆಯ ‘s/o ಮುತ್ತಣ್ಣ’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಪ್ರಣಂ ಈ ಸಿನಿಮಾ ಮೂಲಕ ಹಿಟ್ ಕೊಡ್ತಾರೆ ಅನ್ನೋ ಭರವಸೆ ಕೂಡ ಹೆಚ್ಚಾಗಿದೆ. ಇದೇ ಸಮಯದಲ್ಲಿ ‘s/o ಮುತ್ತಣ್ಣ’ ಆಡಿಯೋ ದಾಖಲೆ ಬೆಲೆಗೆ A2 ಸಂಸ್ಥೆಗೆ ಮಾರಾಟವಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆ ದುಪ್ಪಟ್ಟಾಗಿದೆ.
‘s/o ಮುತ್ತಣ್ಣ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಲ್ಲರ ಗಮನ ಸೆಳೀತಿದೆ. ಮಗ ಪ್ರಣಂ ದೇವರಾಜ್ ಹೊಸ ಚಿತ್ರಕ್ಕೆ ದೇವರಾಜ್ ಶುಭ ಹಾರೈಸಿದ್ರು. ಇನ್ನೂ ಪ್ರೇಮ್ಸ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶ್ರೀಕಾಂತ್, ‘s/o ಮುತ್ತಣ್ಣ’ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ಶೀರ್ಷಿಕೆ ಹೇಳುತ್ತಿರುವಂತೆ ಅಪ್ಪ-ಮಗನ ಭಾಂದವ್ಯ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಇನ್ನೂ ಸಿನಿಮಾದಲ್ಲಿ ಹಲವು ಹಿರಿಯ ನಟರು ಪಾತ್ರ ಮಾಡ್ತಿರೋದು ವಿಶೇಷ.
ಪುರಾತನ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ SRK ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಾಣವಾಗಿದೆ. ಸಚ್ಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳು ದಾಖಲೆ ಬೆಲೆಗೆ ಅಂದ್ರೆ ಅಂದಾಜು 47ಲಕ್ಷಕ್ಕೆ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ.
ಯೋಗರಾಜ್ ಭಟ್ರು, ಕಿನ್ನಾಳ್ ರಾಜ್, ಕವಿರಾಜ್, ಚೇತನ್ ಕುಮಾರ್ ಅವರ ಸಾಹಿತ್ಯ ಈ ಸಿನಿಮಾದ ಹಾಡುಗಳಿಗಿದೆ. ಸದ್ಯ ಸಂಗೀತಕ್ಕೆ ಇಷ್ಟು ಪವರ್ ಇದ್ಮೇಲೆ A2 ಸಂಸ್ಥೆ ಹಾಡುಗಳಿಗೆ ಫಿದಾ ಆಗಿದೆ.
No Comment! Be the first one.