ಟಾಲಿವುಡ್ ನಟ ಪ್ರಭಾಸ್ ಹಾಗೂ ನಟಿ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಾಹೋ ಸಿನಿಮಾದ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚಿತ್ರದ ಪ್ರಮೋಷನ್ ಬ್ಯುಸಿಯಲ್ಲಿರುವ ಸಾಹೋ ಟೀಮ್, ಈ ಮಧ್ಯೆ ಸಾಹೋ ದಿ ಗೇಮ್ ಎಂಬ ಎಕ್ಸ್ ಕ್ಲ್ಯೂಸಿವ್ ಗೇಮ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಪ್ರಭಾಸ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸಾಹೋ ದಿ ಗೇಮ್ ನ ಫಸ್ಟ್ ಲುಕ್ ಪೋಸ್ಟರ್ ನ್ನು ರಿಲೀಸ್ ಮಾಡಿದ್ದು, ಹಾಯ್ ಡಾರ್ಲಿಂಗ್ಸ್! ಶೀಘ್ರದಲ್ಲೇ ‘ಸಾಹೋ ದಿ ಗೇಮ್’ ರಿಲೀಸ್ ಆಗಲಿದ್ದು, ಈ ಗೇಮ್ನ ಅನುಭವ ಪಡೆದುಕೊಳ್ಳಿ ಅಂತಾ ಫ್ಯಾನ್ಸ್ಗೆ ಹೇಳಿದ್ದಾರೆ.
https://www.instagram.com/p/B0k-ySKHuvc/?utm_source=ig_web_copy_link
ಆಯುಧಗಳನ್ನು ಬಳಸಿ ಶತ್ರುಗಳನ್ನು ಹೊಡೆದುರುಳಿಸುವ ಆಕ್ಷನ್ ಮಿಶ್ರಿತ ಗೇಮ್ ಇದಾಗಿರಲಿದೆ. ಜೊತೆಗೆ ಇದನ್ನು ಆಡುವ ಮೂಲಕ ಸಾಹೋ ಸಿನಿಮಾ ಟಿಕೆಟ್ ಗೆಲ್ಲುವ ಸುವರ್ಣಾವಕಾಶ ಕೂಡ ಫ್ಯಾನ್ಸ್ಗೆ ಸಿಗಲಿದೆ. ಪೋಸ್ಟರ್, ಟೀಸರ್, ಗೇಮ್ ಮೂಲಕ ಸಿನಿರಸಿಕರ ಕುತೂಹಲ ಕೆರಳಿಸಿರುವ ಸಾಹೋ ಸಿನಿಮಾ ಆಗಸ್ಟ್ 30ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
No Comment! Be the first one.