ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ನಾಯಕಿ ಶ್ರದ್ಧಾ ಕಪೂರ್ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡರು. ನಟಿಯ ಜನ್ಮದಿನದ ಅಂಗವಾಗಿ ಟೀಸರ್ ರಿಲೀಸ್ ಮಾಡಿದ್ದು, ವಿಡಿಯೋ ತುಂಬಾ ಭರಪೂರ ಆಕ್ಷನ್ ದೃಶ್ಯಗಳು ಹಾಗೂ ಮೇಕಿಂಗ್ ಕ್ಲಿಪಿಂಗ್ಗಳಿವೆ. 2017ರ ‘ಬಾಹುಬಲಿ’ ಸರಣಿ ಸಿನಿಮಾ ನಂತರ ಪ್ರಭಾಸ್ ‘ಸಾಹೋ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 300 ಕೋಟಿ ರೂಪಾಯಿ ಭಾರಿ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಚಿತ್ರದಲ್ಲಿ ವಿಎಫ್ಎಕ್ಸ್ಗೆ ದೊಡ್ಡ ಮೊತ್ತ ಮೀಸಲಿಡಲಾಗಿದೆ.
‘ಸಾಹೋ’ ಹಿಂದಿ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಚಿತ್ರಿತವಾಗುತ್ತಿದೆ. ನಾಯಕಿಯಾಗಿ ಬಾಲಿವುಡ್ನ ಶ್ರದ್ಧಾ ಕಪೂರ್ ನಟಿಸುತ್ತಿದ್ದು, ನಿನ್ನೆ ನಟಿಯ ಜನ್ಮದಿನವಿತ್ತು. ಈ ದಿನದ ವಿಶೇಷವೆಂದು ಚಿತ್ರದ ನೂತನ ಟೀಸರ್ ಬಿಡುಗಡೆ ಮಾಡಿದ್ದಾರೆ. ಪ್ರಭಾಸ್ ಜೊತೆ ಶ್ರದ್ಧಾ ಕೂಡ ಆಕ್ಷನ್ನಲ್ಲಿ ಮಿಂಚಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಕ್ಯಾಮರಾ ಹಿಂದಿನ ತಂತ್ರ, ಸ್ಟಂಟ್ಗಳು, ವಿಎಫ್ಎಕ್ಸ್ ವಿಡಿಯೋದಲ್ಲಿ ಗೋಚರಿಸುತ್ತದೆ. ಇಲ್ಲಿಯವರೆಗೂ ಚಿತ್ರದ ಕತೆಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಟೀಸರ್ ನೋಡಿದಾಗ ಚಿತ್ರದಲ್ಲಿ ಸಾಕಷ್ಟು ಖಳರಿರುವುದು ಗೋಚರಿಸುತ್ತದೆ. ನೀಲ್ ನಿತಿನ್ ಮುಖೇಶ್, ಈವ್ಲಿನ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಆಗಸ್ಟ್ 15ರಂದು ತೆರೆಕಾಣಲಿದೆ.
No Comment! Be the first one.