ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಜೋಡಿಯಾಗಿ ನಟಿಸಿರುವ ಸಾಹೋ ಚಿತ್ರವನ್ನು ಈ ಹಿಂದೆ ಆಗಸ್ಟ್ 15ರಂದು ಬಿಡುಗಡೆ ಮಾಡುತ್ತೇವೆಂದು ಚಿತ್ರತಂಡವು ಅನೌನ್ಸ್ ಮಾಡಿತ್ತು. ಆದರೆ ಮಿಶನ್ ಮಂಗಲ್, ಬಾಟ್ಲ ಹೌಸ್ ಚಿತ್ರಗಳ ಪ್ರಭಾವಕ್ಕೆ ಕಟ್ಟು ಬಿದ್ದು, ಸಾಹೋ ಮತ್ತೂ 15 ದಿನಗಳ ಕಾಲ ರಿಲೀಸ್ ದಿನಾಂಕವನ್ನು ಪೋಸ್ಟ್ ಪನ್ ಮಾಡಿದೆ ಎನ್ನಲಾಗುತ್ತಿದೆ. ಯೂ.ವಿ. ಕ್ರಿಯೇಷನ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಸಂದೇಶ ರವಾನಿಸಿದ್ದು, ಆಗಸ್ಟ್ 30ರಂದು ಸಾಹೋ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.
No compromise on the content and quality!
The action begins in cinemas from 30th Aug. #Saaho releasing worldwide on 30.08.2019.#Prabhas @ShraddhaKapoor @NeilNMukesh @arunvijayno1 @sujeethsign @UV_Creations @itsBhushanKumar @TSeries #30thAugWithSaaho pic.twitter.com/Clne9tuiVS— UV Creations (@UV_Creations) July 19, 2019
ಬಾಹುಬಲಿ 2 ಚಿತ್ರದ ನಂತರ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಇದಾಗಿದ್ದು, ಈಗಾಗಲೇ ಟ್ರೇಲರ್, ಆಡಿಯೋ ಮೂಲಕ ಬಹಳಷ್ಟು ಪ್ರಶಂಸೆಯನ್ನು ಗಳಿಸಿದೆ. ಸಾಹೋ ಮೂಲಕ ಇದೇ ಮೊದಲ ಬಾರಿಗೆ ಪ್ರಭಾಸ್ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಸಾಹೋ ಬಿಡುಗಡೆಯಾಗಲಿದ್ದು, ಬಾಹುಬಲಿ ರೆಕಾರ್ಡ್ ಗಳನ್ನು ಸಾಹೋ ಮುರಿಯಬಹುದೆಂಬ ಭರವಸೆ ಅಭಿಮಾನಿಗಳಲ್ಲಿದೆ. ಇನ್ನು ಆಗಸ್ಟ್ 29ರಂದು ಪೈಲ್ವಾನ್ ಭಾರತದಾದ್ಯಂತ ಬಿಡುಗಡೆಯಾಗುವುದಾಗಿ ಘೋಷಿಸಿದ್ದು, ಸಾಹೋ ಎಫೆಕ್ಟ್ ನಿಂದ ಪೈಲ್ವಾನ್ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
Comments