ಭಾರತದಾದ್ಯಂತ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಟೌನ್ ನಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿದೆ. ಬಾಹುಬಲಿ ನಂತರ ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸಿನಿಮಾ ಇದಾಗಿರೋದೇ ಎಲ್ಲಕ್ಕೂ ಮೇನ್ ರೀಜನ್. ಈಗಾಗಲೇ ಟ್ರೇಲರ್​ ಮೂಲಕ ಸಂಚಲನ ಸೃಷ್ಟಿಸಿರುವ ಚಿತ್ರತಂಡ ಇದೀಗ ಮತ್ತೊಂದು ಸಾಂಗ್ ಬಿಡುಗಡೆ ಮಾಡಿದೆ. ಈ ಹಿಂದೆ ರೋಮ್ಯಾಂಟಿಕ್ ಗೀತೆಯ ಮೂಲಕ ಹಾರ್ಟ್​ಗೆ ಲಗ್ಗೆಯಿಟ್ಟ ಟೀಂ ಸಾಹೋ ಈ ಬಾರಿ ಸಖತ್ ಹಾಟ್ ಗೀತೆಯೊಂದಿಗೆ ಪಡ್ಡೆ ಹೈಕಳ ಮೈ ಬಿಸಿ ಏರಿಸಿದೆ.

ಬ್ಯಾಡ್ ಬಾಯ್ ಲಿರಿಕ್ ನೊಂದಿಗೆ ಮೂಡಿಬಂದಿರುವ ಈ ಹಸಿಬಿಸಿ ಸಾಂಗಿನಲ್ಲಿ ಪ್ರಭಾಸ್ ಗೆ ಜಾಕ್ವೆಲಿನ್ ಫರ್ನಾಂಡೀಸ್ ಜತೆಯಾಗಿದ್ದಾರೆ. ಈ ಮೊದಲು ನಾಯಕಿಯಾಗಿ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಜಾಕ್ವಲಿನ್ ಸಡನ್ ಪ್ರತ್ಯಕ್ಷ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ. Rapper ಬಾದ್ ಶಾ ಸಂಗೀತ ಸಂಯೋಜಿಸಿ ಈ ಗೀತೆಯನ್ನು ಹಾಡಿದ್ದು, ಬಾಹುಬಲಿ ಹುಡುಗನ ಬ್ಯಾಡ್ ಬಾಯ್ ಲುಕ್ಕಿಗೆ ರೆಬಲ್ ಸ್ಟಾರ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರವು ಆಗಸ್ಟ್​ 30 ರಂದು ದೇಶದಾದ್ಯಂತ ಹಲವು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮಾಸ್ತಿಗುಡಿ ಆರೋಪಿಗಳ ಅರ್ಜಿ ವಜಾ ಮಾಡಿದ ರಾಮನಗರ ನ್ಯಾಯಾಲಯ!

Previous article

ಪಥ ಬದಲಿಸಿದ ಪುರಿ ಜಗನ್ನಾಥ್!

Next article

You may also like

Comments

Leave a reply

Your email address will not be published. Required fields are marked *