ಬಾಹುಬಲಿ 2 ಚಿತ್ರದ ನಂತರ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಸಾಹೋ. ರಿಲೀಸ್ ಗೂ ಮುನ್ನವೇ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಸಾಹೋ ಟೀಸರ್, ಟ್ರೇಲರ್, ಆಡಿಯೋ ಮೂಲಕ ಸಖತ್ತಾಗಿಯೇ ಸೌಂಡು ಮಾಡುತ್ತಿದೆ. ಬರೋಬ್ಬರಿ 4500 ಸ್ಕ್ರೀನ್ ನಲ್ಲಿ ಸಾಹೋ ಬಿಡುಗಡೆಯಾಗಲಿದ್ದು, ತಮಿಳುನಾಡಿನಲ್ಲಿಯೇ 550 ಸ್ಕ್ರೀನ್ ಗಳಲ್ಲಿ ಸಾಹೋ ಪ್ರದರ್ಶನಗೊಳ್ಳಲಿದೆ. ಅಲ್ಲದೇ ತಮಿಳುನಾಡಿನಲ್ಲಿ ಹೆಚ್ಚು ಸ್ಕ್ರೀನ್ ಗಳಿಸಿರುವ ಕಾರಣ ಅಲ್ಲಿನ ವ್ಯವಹಾರವೂ ಬಾಹುಬಲಿ 2 ತಮಿಳುನಾಡಿನಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಆದಾಯವನ್ನು ಗಳಿಸಬಹುದೆಂಬ ನಿರೀಕ್ಷೆ ವಿಮರ್ಶಕರಲ್ಲಿದೆ.

ಇನ್ನು ಸಾಹೋ ತೆಲುಗು ಭಾಷೆಯಲ್ಲಿ 125 ಕೋಟಿಗೆ ಮಾರಾಟವಾಗಿದ್ದು, ಬಾಹುಬಲಿ 2 ಸಿನಿಮಾ 122 ಕೋಟಿ ರುಪಾಯಿಗೆ ವಿತರಣೆಯ ಹಕ್ಕು ಮಾರಾಟವಾಗಿತ್ತು. ಅಲ್ಲದೇ ಸಂಭಾವನೆ ವಿಚಾರದಲ್ಲಿಯೂ ಪ್ರಭಾಸ್ ರಾಜಿಯಾಗದೇ ಬಾಹುಬಲಿ 2 ಚಿತ್ರದಲ್ಲಿ ಪಡೆದ ಸಂಭಾವನೆಗಿಂತ ಮೂರು ಪಟ್ಟು ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಬಾಹುಬಲಿ 2 ದಾಖಲೆಯನ್ನು ಸಾಹೋ ಬಿಡುಗಡೆಗೂ ಮುನ್ನವೇ ಸರಿಗಟ್ಟಿದ್ದು ಹೊಸ ದಾಖಲೆಯನ್ನೇ ಬರೆದಿದೆ. ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ವಿಶೇಷ ಹಾಡೊಂದರಲ್ಲಿ ಮೈ ಕುಣಿಸಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಸಾಹೋ ಚಿತ್ರದ ಬ್ಯಾಡ್ ಬಾಯ್ ಹಾಡು ಯೂಟ್ಯೂಬ್ ನಲ್ಲಿ ಟಾಪ್ 2 ಟ್ರೆಂಡಿಂಗ್ ನಲ್ಲಿದೆ. ಇದುವರೆಗೆ 1.34 ಕೋಟಿ ಹಿಟ್ಸ್ ಕಂಡಿದೆ.. ಒಟ್ಟಾರೆ ಸಿನಿಮಾ ಆಗಸ್ಟ್ 30 ರಂದು ರಿಲೀಸ್ ಆಗುತ್ತಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

CG ARUN

ಜೀ ಕನ್ನಡದಲ್ಲಿ ಪೈಲ್ವಾನ್ ಆಡಿಯೋ ಕಾರ್ಯಕ್ರಮ!

Previous article

ಕರೋಡ್ ಪತಿ ಕಾರ್ಯಕ್ರಮದಲ್ಲೂ ಪಬ್ಜಿ ಹವಾ!

Next article

You may also like

Comments

Leave a reply

Your email address will not be published. Required fields are marked *