ಬಾಹುಬಲಿ ಸಿನಿಮಾದ ಮೂಲಕ ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ರೆಬಲ್ ಸ್ಟಾರ್ ಮನರಂಜನಾ ವಾಹಿನಿಯೊಂದನ್ನು ಆರಂಭಿಸಲಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯ ಮಂತ್ರಿ ನಲ್ಲರಿ ಕಿರಣ್ ಕುಮಾರ್ ರೆಡ್ಡಿ ಅವರೊಂದಿಗೆ ಮನರಂಜನಾ ಆಧಾರಿತ ಚಾನೆಲನ್ನು ಪ್ರಾರಂಭಿಸಲು ಪ್ರಭಾಸ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಚಾನಲ್ ಗೆ ಎಂಟರ್ ಟೈನ್ಮೆಂಟ್ ಎಂದು ಹೆಸರಿಡಲಾಗಿದ್ದು, ಈಗಾಗಲೇ ಲೈಸೆನ್ಸ್ ಕೂಡ ಪಡೆದಿದ್ದಾರೆ.
ಸುಜಿತ್ ರೆಡ್ಡಿ ಮತ್ತು ರಾಧಾ ಕೃಷ್ಣ ಕುಮಾರ್ ಅವರು ಪ್ರಭಾಸ್ ಎಂಟರ್ಟೈನ್ಮೆಂಟ್ ಚಾನೆಲ್ನ ಕೋ ಪಾರ್ಟನರ್ ಆಗಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸದ್ಯ ಪ್ರಭಾಸ್ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಸುಜೀತ್ ರೆಡ್ಡಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಸಾಹೋ ಸ್ವಾತಂತ್ರ್ಯ ದಿನಕ್ಕೆ ರಿಲೀಸ್ ಕೂಡ ಆಗಲಿದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಭಾಸ್ ಜತೆಗೆ ಡ್ಯುಯೇಟ್ ಆಡಲಿದ್ದಾರೆ. ಇನ್ನುಳಿದಂತೆ ಜಾಕಿ ಶ್ರಾಫ್, ಮಂಡಿರಾ ಬೇಡಿ ಮತ್ತು ನೀಲ್ ನಿತಿನ್ ಮುಖೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.
No Comment! Be the first one.