ಆರಂಭದಿಂದಲೂ ಕುತೂಹಲ ಕಾಯ್ದುಕೊಂಡು ಬಂದಿರುವ ಸಿನಿಮಾ ಸಾಹೋ. ಬಾಹುಬಲಿ ನಂತರ ನಿರ್ಮಾಣವಾಗುತ್ತಿರುವ ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಟಾಲಿವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗವೇ ಸಾಹೋ ವಿಶ್ವಾಸವನ್ನಿಟ್ಟುಕೊಂಡಿದೆ. ಈ ಸಿನಿಮಾ ಇದೇ ಆಗಸ್ಟ್ 14ಕ್ಕೆ ರಿಲೀಸ್ ಆಗುವುದಾಗಿಯೂ ಘೋಷಿಸಿದೆ.
https://www.instagram.com/p/ByhqMDHHIvX/?utm_source=ig_web_copy_link
ಸದ್ಯ ಸಾಹೋ ಚಿತ್ರದಲ್ಲಿ ನಟಿಸಿರುವ ಶ್ರದ್ಧಾಕಪೂರ್ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರಭಾಸ್ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ‘ಹೇ ಡಾರ್ಲಿಂಗ್ಸ್, ಇದೇ ಜೂ.13 ರಂದು ಸಾಹೋ ಟೀಸರ್ ಬಿಡುಗಡೆಯಾಗಲಿದೆ ಮತ್ತು ಜೂ.14 ರಂದು ಥಿಯೇಟರ್ ಗಳಲ್ಲಿ ಇದನ್ನು ನೀವು ನೋಡಬಹುದು‘ ಎಂದು ಬರೆದುಕೊಂಡಿದ್ದಾರೆ. ಸಾಹೋ ಚಿತ್ರವನ್ನು ಸುಜಿತ್ ನಿರ್ದೇಶನ ಮಾಡುತ್ತಿದ್ದು, ಯೂವಿ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗಲಿದೆ.
Howdy! [url=http://canadianonlinepharmacyllp.com/#online-drugstore]online pharmacy no prescription needed[/url] very good web page.