ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ನಟಿಸಿರುವ ಬಹುನಿರೀಕ್ಷಿತ ಸಾಹೋ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಿನಿಪ್ರೇಮಿಗಳ ನಿರೀಕ್ಷೆಯನ್ನು ಗಟ್ಟಿಗೊಳಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿಯೂ ಇದೆ.

ನಿನ್ನೆ 11.23ಕ್ಕೆ ಬಿಡುಗಡೆಯಾದ ಟೀಸರ್ 1 ಲಕ್ಷಕ್ಕೂ ಹೆಚ್ಚು ಟ್ವೀಟ್ ಆಗಿದ್ದು, ಗುರುವಾರ ಸಾಹೋ ಟೀಸರ್ ಭಾರತದಾದ್ಯಂತ ಹೆಚ್ಚು ಚರ್ಚೆಯಲ್ಲಿತ್ತು. ಮೊದಲಿಗೆ #INDvNZ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದರೆ ಬರುಬರುತ್ತಾ ಸಾಹೋ ಕುರಿತಾದ ಹ್ಯಾಶ್ ಟ್ಯಾಗ್ ಹವಾ ಜೋರಾಗಿ ಹೋಯಿತು.

ತೆಲುಗು ಆವೃತ್ತಿಯ ಸಾಹೋ ಟೀಸರ್ ಕೇವಲ 23 ನಿಮಿಷಗಳಲ್ಲಿ ಒಂದು ಲಕ್ಷ ಲೈಕ್ ಗಳನ್ನು ಪಡೆಯುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಇಲ್ಲಿಯವರೆಗೂ 148 ಲಕ್ಷ ಹಿಟ್ಸ್ ನ್ನು ಸಾಹೋ ತೆಲುಗು ಟೀಸರ್ ಪಡೆದಿದೆ. ಇನ್ನು ಸಾಹೋ ಹಿಂದಿ ಟೀಸರ್ ಒಂದು ಗಂಟೆಯಲ್ಲಿಯೇ ತೆಲುಗು ಟೀಸರ್ ನ ದುಪ್ಪಟ್ಟು ಹಿಟ್ಸ್ ಪಡೆದಿದ್ದು, ಸದ್ಯ 240 ಲಕ್ಷ ಹಿಟ್ಸ್ ಪಡೆದು ಮುನ್ನುಗ್ಗುತ್ತಿದೆ.

Arun Kumar

ಬಾಲಿವುಡ್ ಗೆ ಎಂಟ್ರಿ ಪಡೆಯಲಿದ್ದಾರೆ ಕಿಂಗ್ ಖಾನ್ ಪುತ್ರಿ!

Previous article

ಜೂನ್ 17ಕ್ಕೆ ರಾಂಧವ ಟೈಟಲ್ ಟ್ರ್ಯಾಕ್ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *