ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಸಾಹೋ ಸಿನಿಮಾದ ಐಟಂ ಸಾಂಗ್ ಒಂದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮೈಕುಣಿಸಲಿದ್ದಾರೆ. ಈ ಮೂಲಕ ಮಲ್ಟಿ ಸ್ಟಾರರ್ ಸಿನಿಮಾ ಸಾಹೋದಲ್ಲಿ ಮತ್ತೊಬ್ಬ ಸ್ಟಾರ್ ನಟಿ ಎಂಟ್ರಿಯಾಗಿದೆ.

ಬಾಹುಬಲಿ 2 ಚಿತ್ರದ ನಂತರ ಪ್ರಭಾಸ್ ನಟಿಸಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, 300 ಕೋಟಿ ವೆಚ್ಚದಲ್ಲಿ ತಯಾರಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಮತ್ತು ಕಾಲಿವುಡ್ ನ ಬಹುತೇಕ ನಟ ನಟಿಯರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನುವುದು ಸಾಹೋ ಹೆಗ್ಗಳಿಕೆ. ಸಾಹೋದಲ್ಲಿ ಶೂಟ್ ಮಾಡಿರುವ ಸ್ಪೆಷಲ್ ಸಾಂಗ್ ಇದಾಗಿದ್ದು, ಅದರಲ್ಲಿ ಜಾಕ್ವೆಲಿನ್ ಮಾದಕವಾಗಿ ಮೈ ಬಳುಕಿಸಿದ್ದಾರೆ. ಈಗಾಗಲೇ ಈ ಹಾಡಿನ ಚಿತ್ರೀಕರಣ ಮುಗಿದಿದ್ದು ಅಂತಿಮ ಹಂತದಲ್ಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅನಿರೀಕ್ಷಿತ ತಿರುವುಗಳ ಚಿತ್ರಕಥಾ!

Previous article

ಚಾಲೆಂಜ್ ರೋಲ್ ಗಳಿಗೆ ಕಾಯುತ್ತಿದ್ದಾರೆ ಭೂಮಿ ಪಡ್ನೇಕರ್!

Next article

You may also like

Comments

Leave a reply

Your email address will not be published. Required fields are marked *