ಭಾರತ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಮಾಡಿದ್ದ ಬಾಹುಬಲಿ ಸಿನಿಮಾದ ಕೇಂದ್ರಬಿಂದು ಪ್ರಭಾಸ್ ನಟನೆ ಅಮೋಘವಾದದ್ದು. ಪ್ರಭಾಸ್ ಈ ಸಿನಿಮಾಕ್ಕಾಗಿಯೇ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡು ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದರು.
ಸ್ಟ್ರಿಕ್ಟ್ ಡಯಟ್ ಫಾಲೋ ಮಾಡಿದ್ದ ಪ್ರಭಾಸ್ ರೇಜಾರ್ ಚೂಪಾದ ಆಬ್ಸ್ ಅವತಾರವನ್ನು ಪಡೆಯಲು ಆಹಾರ ಪದ್ದತಿಯ ಮೇಲೂ ನಿಗಾ ಇರಲಿಸಿದ್ದರು. ಆದರೆ ಅವರ ಅಪ್ ಕಮಿಂಗ್ ಸಿನಿಮಾ ಸಾಹೋ ಪಾತ್ರಕ್ಕಾಗಿ ಪ್ರಭಾಸ್ ಎಂಟು ಕೆಜಿ ತೂಕವನ್ನು ನಿರ್ದೇಶಕರ ಒತ್ತಾಯದ ಮೇರೆಗೆ ಕಳೆದುಕೊಳ್ಳಬೇಕಾಗಿದೆಯಂತೆ. ಕಡಿಮೆ ಕಾರ್ಬೋಹೈಡ್ರೇಟ್ ಗಳೊಂದಿಗೆ ಎಂಟು ಕಿಲೋಗ್ರಾಂ ತೂಕವನ್ನು ಕಳೆದುಕೊಳ್ಳುವಲ್ಲಿಯೂ ಪ್ರಭಾಸ್ ಯಶಸ್ವಿಯಾಗಿದ್ದಾರೆ.