ರಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಜೋಡಿ ಹೊಸ ಸಿನಿಮಾ ವಿರಾಟ್ ಪರ್ವಂ ನಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರದ ಸಂಗತಿಯೇನಲ್ಲ. ಈ ಸಿನಿಮಾವನ್ನು ವೇಣು ಉಡುಗುಲ ನಿರ್ದೇಶನ ಮಾಡುತ್ತಿದ್ದಾರೆ. ಇದು 1990ರ ಅವಧಿಯಲ್ಲಿ ತೆಲಂಗಾಣದಲ್ಲಿ ನಡೆದ ಸತ್ಯಘಟನೆಗಳನ್ನು ಆಧರಿಸಿದ ಸಿನಿಮಾ ಕೂಡ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರೌಡಿ ಬೇಬಿ ವಿರಾಟ್ ಪರ್ವಂ ಶೂಟಿಂಗ್ ಯಾವಾಗ ಪ್ರಾರಂಭವಾಗಬಹುದೆಂದು ಕೇಳಿದಾಗ ತಾನು ಆ ಸಿನಿಮಾದಿಂದ ಹೊರ ಬಂದಿರುವುದಾಗಿ, ಅದರ ಕುರಿತು ತನಗೆ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ. ರಣ ಅವರ ಡೇಟ್ ಹೊಂದಾಣಿಕೆಯ ಕೊರತೆಯಿಂದ ಹಾಗೂ ರಾಣ ಈ ಸಿನಿಮಾದ ಮೇಲೆ ಅಷ್ಟೇನು ಅಸಕ್ತಿ ತೋರಿಸುತ್ತಿಲ್ಲದ ಕಾರಣ ಸಾಯಿ ಪಲ್ಲವಿ ರಾಣ ಜೊತೆ ನಟಿಸುವುದನ್ನು ಕ್ವಿಟ್ ಮಾಡಿದ್ದಾರೆ.
ಇನ್ನು ವಿರಾಟ್ ಪರ್ವಂ ಸಿನಿಮಾ ಜೂನ್ ತಿಂಗಳಿನಲ್ಲಿ ಸೆಟ್ಟೇರುತ್ತಿದ್ದು, ಚಿತ್ರತಂಡ ಹಿರೋಯಿನ್ ಹುಡುಕಾಟದಲ್ಲಿದ್ದಾರೆ. ಇನ್ನು ಸಾಯಿ ಪಲ್ಲವಿ ನಿರ್ದೇಶಕ ತ್ರಿವಿಕ್ರಮ್ ಆ್ಯಕ್ಷನ್ ಕಟ್ ಹೇಳುತ್ತಿರುವ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.