ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬೋದ ಸಖತ್ ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸುನಿ ಡೈಲಾಗ್.. ಗಣಿ ಆಕ್ಟಿಂಗ್ ಗೆ ಪ್ರೇಕ್ಷಕ ಪ್ರಭು ಬಹುಪರಾಕ್ ಅಂತಿದ್ದಾನೆ. ಚಿತ್ರಪ್ರೇಮಿಗಳನ್ನು ನಕ್ಕು ನಲಿಸುತ್ತಿರುವ ಸಖತ್ ಸಿನಿಮಾದ ಕಥೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಸಖತ್ ಸಿನಿಮಾದ ಬಾಡಿಗೆ ಮನೆ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಡಿಗೆ ಮನೆಗಾಗಿ ನಾಯಕ ಎಷ್ಟೆಲ್ಲಾ ಕಷ್ಟಪಡುತ್ತಾನೆ ಅನ್ನೋದನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಹಾಡಿನ ಜೊತೆಗೆ ಬರುವ ಕಾಮಿಡಿ ಡೈಲಾಗ್ಸ್ ಅಂತೂ ಸಖತ್ ಮಜಾ ಕೊಡ್ತಿವೆ. ಗಣೇಶ್ ಹಾಗೂ ಧರ್ಮಣ್ಣ ಕಡೂರು ಕಾಮಿಡಿ ಜುಗಲ್ ಬಂದಿ ನೋಡೋದಿಕ್ಕೆ ಸಖತ್ ಆಗಿದೆ. ನಾಯಕಿ ಸುರಭಿ ಈ ಹಾಡಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚರೀಶ್ ಗೌಡ, ಜೈಶಾಂತ್ ಲಿರಿಕ್ಸ್ ಬರೆದಿರುವ ಮನೆ ಬೇಕು ಹಾಡನ್ನು ನಾರಾಯಣ ಶರ್ಮಾ ಹಾಡಿದ್ದು, ಜೂಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಸಖತ್ ಸಿನಿಮಾದಲ್ಲಿ ಸಿಂಪಲ್ ಸುನಿ ಡೈಲಾಗ್ಸ್ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಗೋಲ್ಡನ್ ಸ್ಟಾರ್ ಗಣೇಶ್ ಕಂಬ್ಯಾಕ್ ಅಂತಾ ಫ್ಯಾನ್ಸ್ ಜೈಕಾರ ಮೊಳಗಿಸ್ತಿದ್ದಾರೆ. ಗಣಿ ಸುನಿ ಜೋಡಿ ಚಮಕ್ ಬಳಿಕ ಮತ್ತೆ ಒಂದಾಗಿ ಮಾಡಿರುವ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಬೆಂಗಳೂರಿನ ವೀರೇಶ್ ಥಿಯೇಟರ್ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು, ಡೈರೆಕ್ಟರ್ ಸಿಂಪಲ್ ಸುನಿ ಸಖತ್ ಖುಷಿಯಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಡಿ ತೆರೆಗಪ್ಪಳಿಸಿರುವ ಸಖತ್ ಸಿನಿಮಾವನ್ನು ಸುಪ್ರಿತ್ – ನಿಶಾ  ನಿರ್ಮಾಣ ಮಾಡಿದ್ದಾರೆ

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನನ್ನ ಸಮಾರಂಭಕ್ಕೆ ಬರಲು ಸುದೀಪ್’ಗೆ ಕರೆಯಬೇಕಿಲ್ಲ!

Previous article

ತಟ್ಟೆ ಲೋಟ ತೊಳೆದವರು ದೊಡ್ಡವರಾಗಬಾರದಾ?

Next article

You may also like

Comments

Leave a reply

Your email address will not be published. Required fields are marked *