ಇವತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಖತ್ ತಂಡ ಮೋಷನ್ ಪೋಸ್ಟರೊಂದನ್ನು ರಿಲೀಸ್ ಮಾಡಿದೆ. ಕಲರ್ ಫುಲ್ ಆಗಿ ಮೂಡಿಬಂದಿರುವ ಸಖತ್ನ ಈ ಪೋಸ್ಟರಿನ ಹಿನ್ನೆಲೆಯಲ್ಲಿ ಅಳವಡಿಸಿರುವ ʻಗಣಿ ಗಣಿ ಗಣಿ 24ಕ್ಯಾರೆಟ್ ಚಿನ್ನ ಪಳಪಳ ಹೊಳೆಯುವ ಸ್ಮೈಲು ಸಖತ್…ʼ ಎನ್ನುವ Rap ಹಾಡು ಮೈಕುಣಿಸುವಂತಿದೆ.
ಕೊರೋನಾ ಕಂಟಕದಿಂದ ಕಂಗಾಲಾಗಿರುವ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಯಶಸ್ಸಿನ ಮಹಾ ಪರ್ವವೊಂದು ಬೇಷರತ್ತಾಗಿ ಪುನರಾಗಮನವಾಗಬೇಕಿದೆ. ಒಂದು ದಶಕಕ್ಕೆ ಮುಂಚೆ ಹೀಗೆ ಸಿನಿಮಾರಂಗ ಒಣಗಿಹೋದಂಥಾ ಸ್ಥಿತಿ ತಲುಪಿದ್ದಾಗ ಮುಂಗಾರು ಮಳೆ ಎನ್ನುವ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಜೀವಕಳೆ ತಂದುಕೊಟ್ಟವರು ಗೋಲ್ಡನ್ ಸ್ಟಾರ್ ಗಣೇಶ್. ಮುಂಗಾರುಮಳೆಯ ತೇವವನ್ನು ಉಳಿಸಿಕೊಂಡೇ ಗಣೇಶ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದ ಪರ್ಮನೆಂಟು ಲವರ್ ಬಾಯ್ ಆಗಿದ್ದುಕೊಂಡಿದ್ದೇ ಅದರ ಜೊತೆಜೊತೆಗೆ ಕಾಮಿಡಿ, ಆಕ್ಷನ್ ಜಾನರಿನ ಸಿನಿಮಾಗಳಲ್ಲೂ ನಟಿಸುತ್ತಾ ಬಂದಿದ್ದಾರೆ. ನಮ್ಮ ನಡುವಿನ, ನಮ್ಮೊಳಗಿನ ಪಾತ್ರಗಳನ್ನೇ ತೆರೆ ಮೇಲೆ ಅಭಿನಯಿಸೋ ಮೂಲಕ ಎಲ್ಲ ವಿಧದ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವವರು ಗಣೇಶ್.
ಇತ್ತೀಚಿನ ವರ್ಷಗಳಲ್ಲಿ ಹಿಟ್ ಕಾಂಬಿನೇಷನ್ ಒಂದಾಗೋದು ವಿರಳ. ಸಿನಿಮಾ ಗೆದ್ದಮೇಲೆ ಹೀರೋ ಮತ್ತು ಡೈರೆಕ್ಟರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸೋದೇ ಹೆಚ್ಚು. ಈ ನಿಟ್ಟಿನಲ್ಲಿ ನೋಡಿದರೆ ಗಣೇಶ್ ತಾವು ಕೆಲಸ ಮಾಡಿದ ಬಹುತೇಕ ಎಲ್ಲ ನಿರ್ದೇಶಕರ ಜೊತೆ ಒಳ್ಳೇ ಬಾಂಧವ್ಯವನ್ನು ಕಾಪಾಡಿಕೊಂಡುಬಂದಿದಾರೆ. ಈ ಕಾರಣಕ್ಕೇ ಗಣೇಶ್ ಅವರ ಸಿನಿಮಾಗಲ್ಲಿ ಒಂದಕ್ಕಿಂತಾ ಹೆಚ್ಚು ಸಲ ನಿರ್ದೇಶಕರು ರಿಪೀಟ್ ಆಗಿದ್ದಾರೆ. ಸದ್ಯ ನಿರ್ದೇಶಕ ಸಿಂಪಲ್ ಸುನಿ ಅವರೊಟ್ಟಿಗೆ ಚಮಕ್ ನಂತರ ಇನ್ನೂ ಇರಡು ಸಿನಿಮಾಗಳಲ್ಲಿ ಗಣೇಶ್ ನಟಿಸೋದು ಪಕ್ಕಾ ಆಗಿದೆ. ಅದರಲ್ಲಿ ʻಸಖತ್ʼ ಈಗಾಗಲೇ ಚಿತ್ರೀಕರಣವನ್ನೂ ಆರಂಭಿಸಿದ್ದು, ಸ್ಟೋರಿ ಆಫ್ ರಾಯಘಡ ಇನ್ನೂ ಒಂದು ವರ್ಷದ ನಂತರ ಸೆಟ್ಟೇರುವ ಪ್ಲಾನಿನಲ್ಲಿದೆ.
ಇವತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಖತ್ ತಂಡ ಮೋಷನ್ ಪೋಸ್ಟರೊಂದನ್ನು ರಿಲೀಸ್ ಮಾಡಿದೆ. ಕಲರ್ ಫುಲ್ ಆಗಿ ಮೂಡಿಬಂದಿರುವ ಸಖತ್ನ ಈ ಪೋಸ್ಟರಿನ ಹಿನ್ನೆಲೆಯಲ್ಲಿ ಅಳವಡಿಸಿರುವ ʻಗಣಿ ಗಣಿ ಗಣಿ 24ಕ್ಯಾರೆಟ್ ಚಿನ್ನ ಪಳಪಳ ಹೊಳೆಯುವ ಸ್ಮೈಲು ಸಖತ್…ʼ ಎನ್ನುವ Rap ಹಾಡು ಮೈಕುಣಿಸುವಂತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿಶಾ ವೆಂಕಟ್ ಮತ್ತು ಸುಪ್ರಿತ್ ನಿರ್ಮಿಸುತ್ತಿರುವ ಸಖತ್ ಚಿತ್ರ ಅದಾಗಲೇ ಹದಿನೈದು ದಿನಗಳ ಶೂಟಿಂಗ್ ಮುಗಿಸಿಕೊಂಡಿದೆ. ಉಳಿದ ನಲವತ್ತೈದು ದಿನ ಚಿತ್ರೀಕರಣಗೊಂಡರೆ ಸಖತ್ ಸಮಾಪ್ತಿಯಾಗಲಿದೆ.