ದುನಿಯಾ ವಿಜಯ್ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಟಿಸುತ್ತಿರುವ ಪವರ್ ಫುಲ್ ಸಿನಿಮಾ ಸಲಗ. ಅಂಡರ್ ವರ್ಲ್ಡ್, ಮಾಫಿಯಾ ಕಥೆಯ ಮೂಲಕ ಸಲಗವನ್ನು ಹೆಣೆದಿರುವ ದುನಿಯಾ ವಿಜಯ್ ಈಗಾಗಲೇ ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆ ಚಿತ್ರೀಕರಣವನ್ನು ಸದ್ದಿಲ್ಲದೇ ನಡೆಸುತ್ತಲೇ ಇದ್ದಾರೆ. ಈಗಾಗಲೇ ಸಲಗಕ್ಕೆ ಟಗರು ಟೆಕ್ನಿಕಲ್ ಟೀಮ್ ಸೇರಿಕೊಂಡಿರೋದು ದುನಿಯಾ ವಿಜಯ್ ಗೆ ಆನೆಯ ಬಲವೇ ಸರಿ.
ಈ ಮಧ್ಯೆ ಸಲಗದ ಬಳಗದಲ್ಲಿ ಡಾಲಿ ಧನಂಜಯ್, ಕಾಕ್ ರೋಚ್, ಸಂಜನಾ ಇದ್ದು, ಸದ್ಯ ಅಚ್ಯುತ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಹೌದು.. ಪೊಲೀಸ್ ಕಮೀಷನರ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಖಾಕಿ ಖದರ್ ತೋರಿಸೋಕೆ ರೆಡಿಯಾಗಿದ್ದಾರೆ. ನಾನಾ ಪಾತ್ರಗಳಲ್ಲಿ ಅಚ್ಯುತ್ ಕುಮಾರ್ ನಟನೆಯ ರುಚಿ ಕಂಡಿದ್ದ ಸಿನಿ ರಸಿಕರು ರಗಡ್ ಪೊಲೀಸ್ ಪಾತ್ರದಲ್ಲಿ ನೋಡಿ ಖುಷಿಪಡುವುದಷ್ಟೇ ಸದ್ಯಕ್ಕೆ ಬಾಕಿ ಉಳಿದಿದೆ.
No Comment! Be the first one.