ದುನಿಯಾ ವಿಜಯ್ ಹೀರೋ ಆಗಿ ಮತ್ತೊಂದು ಸುತ್ತಿನ ಗೆಲುವು ದಾಖಲಿಸಬೇಕಿರುವ ಜರೂರತ್ತಿದೆ. ನಿರ್ದೇಶಕನಾಗಿ ಮೊದಲ ಪ್ರಯತ್ನದಲ್ಲೇ ತಲೆಯೆತ್ತಿ ನಿಲ್ಲಬೇಕಿರುವುದು ಅವರ ಮುಂದಿರುವ ಸವಾಲು. ಸದ್ಯದ ಸನ್ನಿವೇಶಗಳನ್ನು ನೋಡುತ್ತಿದ್ದರೆ ಏಕಕಾಲದಲ್ಲಿ ಎರಡೂ ಉದ್ದೇಶ ಸಾಕಾರಗೊಳ್ಳುವ ಲಕ್ಷಣಗಳು ನಿಚ್ಚಳವಾಗಿ ಗೋಚರಿಸುತ್ತಿದೆ.
ಸಲಗ ಸಿನಿಮಾ ಏನಾಗಬಹುದು ಅಂತಾ ಪ್ರೇಕ್ಷಕರು ಮಾತ್ರವಲ್ಲದೆ ಸಿನಿಮಾ ಮಂದಿ ಕೂಡ ಕುತೂಹಲದಿಂದ ಕಾದಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಸಲಗದ ಹಾಡುಗಳು, ಟೀಸರು ಎಲ್ಲವೂ ಸೌಂಡು ಮಾಡಿದೆ. ಸಿನಿಮಾ ಕೂಡ ಗೆಲ್ಲಲು ಬೇಕಿರುವ ಎಲ್ಲ ಅಂಶಗಳನ್ನೂ ಒಳಗೊಂಡಿದೆ ಎನ್ನುವ ಟಾಕ್ ಚಿತ್ರರಂಗದಲ್ಲಿ ಕ್ರಿಯೇಟ್ ಆಗಿದೆ. ಸಿನಿಮಾವೊಂದು ಎಡಿಟಿಂಗ್ ಟೇಬಲ್ಲಿನಲ್ಲಿ ಇದ್ದಾಗಲೇ ಪಾಸಿಟೀವ್ ಫೀಲ್ ಹುಟ್ಟುಹಾಕಿತೆಂದರೆ ಬಿಡುಗಡೆಯ ನಂತರ ಅದು ಗೆಲ್ಲೋದು ಗ್ಯಾರೆಂಟಿ ಎನ್ನುವ ನಂಬಿಕೆ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ.
ಮೂಲಗಳ ಪ್ರಕಾರ ಸಲಗದ ಹಿಂದಿ ಡಬ್ಬಿಂಗ್ ಹಕ್ಕು ಮೂರು ಕೋಟಿಗೆ ವ್ಯಾಪಾರವಾಗಿದೆಯಂತೆ. ಟಿವಿ ರೈಟ್ಸ್ ಕೂಡಾ ಮೂರು ಕೋಟಿ ಕೊಟ್ಟು ಉದಯ ಟಿವಿ ಪಡೆದುಕೊಂಡಿದೆಯಂತೆ. ಇನ್ನು ಡಿಜಿಟಲ್ಲು, ಅದೂ ಇದೂ ಅಂತಾ ಲೆಕ್ಕ ಹಾಕಿದರೂ ಆರು ಕೋಟಿ ಬಂಡವಾಳ ವಾಪಾಸಾಗಿದೆ. ಇಷ್ಟೆಲ್ಲಾ ಆದಮೇಲೆ ವಿತರಕರು ಅಡ್ವಾನ್ಸ್ ಅಮೌಂಟು ಕೊಟ್ಟು ಸಿನಿಮಾ ಪಡೆಯುತ್ತಾರೆ. ಚಿತ್ರದುರ್ಗ ಮತ್ತು ಹೈದ್ರಾಬಾದ್ ಕರ್ನಾಟಕ ಏರಿಯಾಗಳು ಕೂಡಾ ಉತ್ತಮ ಬೆಲೆಗೆ ಮಾತುಕತೆ ಆಗಿವೆಯಂಥೆ. ಏನಿಲ್ಲವೆಂದರೂ ಈಗಾಗಲೇ ಎಂಟರಿಂದ ಹತ್ತು ಕೋಟಿ ತನಕ ಬ್ಯುಸಿನೆಸ್ಸು ಮಾಡಿದೆ ಅನ್ನೋದು ಗಾಂಧಿನಗರದವರ ಲೆಕ್ಕ. ಈಗಾಗಲೇ ಸೇಫ್ ಜ಼ೋನ್ ನಲ್ಲಿರುವ ಸಲಗ ಬಿಡುಗಡೆಯ ನಂತರ ಭರ್ಜರಿ ಕಲೆಕ್ಷನ್ನು ಮಾಡೋದು ಗ್ಯಾರೆಂಟಿ.
ನಿರ್ಮಾಪಕ ಕೆ.ಪಿ. ಶ್ರೀಕಾಂತ್ ವ್ಯವಹಾರ ಚತುರ. ಕಾಸಲ್ಲಿ ಕೃಷಿ ಮಾಡಿ ಲಾಭ ತೆಗೆಯುವ ಬುದ್ಧಿವಂತ ಬೇಸಾಯಗಾರ. ದುಡ್ಡಿನ ಬೆಲೆ, ಸಿನಿಮಾದ ಮೌಲ್ಯ ಎರಡನ್ನೂ ಅರಿತಿರುವ ಕಾರಣಕ್ಕೆ ಕೇಪಿ ಕೈಯಿಟ್ಟಲ್ಲಿ ಲಾಭ ಹರಿದುಬರುತ್ತದೆ.
ಸಲಗದ ಕಂಟೆಂಟ್ ಕೂಡಾ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರದೆ, ಎಲ್ಲಾ ಥರದ ಜನರೂ ಕೂತು ನೋಡುವ ಅಂಶಗಳನ್ನು ಒಳಗೊಂಡಿದೆ. ಎಮೋಷನ್ನು, ಲವ್ವು, ಕಾಮಿಡಿಯ ಜೊತೆಗೆ ರಿಯಲಿಸ್ಟಿಕ್ ಫೈಟುಗಳು ಅದ್ಭುತವಾಗಿ ಮೂಡಿಬಂದಿವೆಯಂಥೆ. ಸತತ ಒಂದು ವರ್ಷದಿಂದ ಕೊರೋನಾ ಸಂಕಟದ ನಡುವೆ ಸಿಲುಕಿ ಒದ್ದಾಡಿರುವ ಜನ ಔಟ್ ಅಂಡ್ ಔಟ್ ಮನರಂಜನೆ ನೀಡುವ, ಪಕ್ಕಾ ಕಮರ್ಷಿಯಲ್ ಸಿನಿಮಾವೊಂದನ್ನು ನಿರೀಕ್ಷಿಸುತ್ತಿದ್ದಾರೆ. ಬಹುಶಃ ಸಲಗ ಸಿನಿಮಾ ಪ್ರೇಕ್ಷಕರ ದಾಹವನ್ನು ನೀಗಿಸಬಹುದು. ಆ ಮೂಲಕ ದುನಿಯಾ ವಿಜಿ ಸಲಗ ವಿಜಯ್ ಆಗಿ ಗೆದ್ದು ಬೀಗಲೂಬಹುದು!
No Comment! Be the first one.