ತಮ್ಮ ಸಿನಿ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ನಟ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್ ಸಲಗ ಸಿನಿಮಾದ ಮೂಲಕ ಆ್ಯಕ್ಷನ್ ಕಟ್ ಹೇಳುವ ತರಾತುರಿಯಲ್ಲಿದ್ದಾರೆ. ಈ ಮೊದಲು ಅದ್ದೂರಿ ಮೇಕಿಂಗ್ ಟೀಸರ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಸಲಗ ಸದ್ಯ ಸ್ವಲ್ಪ ಮೇಕ್ ಓವರ್ ನ ನಂತರ ಹೊಸ ಟೀಮು ಮತ್ತು ಒಳ್ಳೆಯ ಕಥೆಯನ್ನು ರೆಡಿಯಮಾಡಿಕೊಂಡು ಶೂಟಿಂಗ್ ಗೆ ರೆಡಿಯಾಗಿದ್ದು, ಇತ್ತೀಚಿಗೆ ಸವದತ್ತಿ ಎಲ್ಲಮ್ಮನ ಸನ್ನಿಧಿಗೆ ಭೇಟಿ ಮಾಡಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿದೆ.
ಚಿತ್ರದಲ್ಲಿ ಡಾಲಿ ಧನಂಜಯ್, ಕಾಕ್ರೋಚ್ ಖ್ಯಾತಿಯ ಸುಧೀಂದ್ರ ಸೇರಿದಂತೆ ಬಹು ದೊಡ್ಡ ಕಲಾವಿದರೇ ದಂಡೇ ಸಲಗದ ಜತೆಗಿದ್ದಾರೆ. ಬಹಳಷ್ಟು ವಿಚಾರಗಳಿಂದ ಸ್ಪೂರ್ತಿ ಪಡೆದು ಕಥೆಯನ್ನು ಹೆಣೆಯಲಾಗಿದೆ. ಇದೊಂದು ಭೂಗತ ಜಗತ್ತಿನ ಕುರಿತಾದ ಕಥೆಯ ಸಿನಿಮಾವಾಗಿದ್ದು ಕಥೆ ಪ್ರಾರಂಭವಾಗುತ್ತಲೇ ಬಹಳಷ್ಟು ಟ್ವಿಸ್ಟ್ ಅಂಡ್ ಟರ್ನ್ ಗಳನ್ನು ಕಾಣಬಹುದಾಗಿದೆ. ಇನ್ನು ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿರಲಿದೆ. ಜೊತೆಗೆ ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಜೂನ್ 6ರಿಂದ ಶೂಟಿಂಗ್ ಶುರು ಮಾಡುವ ಸಾಧ್ಯತೆ ಇದೆ.
No Comment! Be the first one.