ಸ್ಯಾಂಡಲ್ ವುಡ್ ನಲ್ಲಿ ಲೀಡ್ ಹೀರೋ ಆಗಿ ಗುರುತಿಸಿಕೊಂಡಿದ್ದ ನಟರ ಪೈಕಿ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಒಬ್ಬರು. ಸಲಗದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿರುವ ದುನಿಯಾ ವಿಜಯ್, ಕತೆ, ಚಿತ್ರಕತೆಯನ್ನು ಸ್ವತಃ ಅವರೇ ಬರೆದಿದ್ದಾರೆ. ಇತ್ತೀಚಿಗೆ ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ಸಲಗದ ಮುಹೂರ್ತ ನೆರವೇರಿದ್ದು, ಸಮಾರಂಭಕ್ಕೆ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.
ನಂತರ ಮಾತನಾಡುತ್ತಾ, ವಿಜಯ್ ಹಳೇ ಪರಿಚಯವಾಗಿದ್ದು ಅವರ ಕಷ್ಟದ ದಿನಗಳಿಂದಲೂ ನೋಡುತ್ತಾ ಬಂದಿರುತ್ತೇನೆ. ನಿರ್ದೇಶಕನಾಗುವುದರ ಮೂಲಕ ಸರಿಯಾದ ದಾರಿಗೆ ಬಂದಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನ ಹಿಂದೆ ಕಲಾವಿದ ಇರುವಂತೆ, ಪ್ರತಿಯೊಬ್ಬ ಕಲಾವಿದನ ಹಿಂದೆ ನಿರ್ದೇಶಕ ಇರುತ್ತಾನೆ. ಎಲ್ಲಿವರೆಗೂ ಅದನ್ನು ತೋರಿಸುವ ಧೈರ್ಯ ಇರುತ್ತದೆಯೋ ಅಲ್ಲಿಯವರೆಗೂ ಸಕ್ಸಸ್ ಕಾಣಲು ಸಾಧ್ಯ ಎಂದರು.
ಒಬ್ಬ ಮುಗ್ದ ಆರೋಪಿ ಹೇಗಿರುತ್ತಾನೆಂಬುದನ್ನು ಚಿತ್ರದಲ್ಲಿ ನೋಡಬಹುದು. ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಕಾಡಿನ ಕತೆ ಎಂದು ಭಾವಿಸಬೇಡಿ. ಇದು ನಾಡಿನ ಕತೆಯಾಗಿರುತ್ತದೆ. ಡಾಲಿ, ಕಾಕ್ರೋಚ್ ಪಾತ್ರ ನೋಡಿ ಅವರೊಂದಿಗೆ ನಟಿಸುವ ಬಯಕೆ ಈ ಚಿತ್ರದ ಮೂಲಕ ಈಡೇರುತ್ತಿದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಮಿಕ್ಕ ವಿಷಯವನ್ನು ಕೆಲಸ ಮಾಡಿ ಮುಗಿಸಿದ ನಂತರ ಹೇಳುವುದಾಗಿ ಪ್ರಶ್ನೆಗಳಿಂದ ಜಾರಿಕೊಂಡರು ದುನಿಯಾ ವಿಜಯ್.
ಸಿನಿಮಾ ಮಾಡುವವರು ನಿನ್ನ ಮುಖಕ್ಕೆ ಹೊಂದುವಂತಹ ಪಾತ್ರ ಸೃಷ್ಟಿಸುತ್ತಾರೋ ಆಗ ಕಲಾವಿದನಿಗೆ ಗೌರವ ಸಿಕ್ಕಂತೆ ಎಂದು ಸುದೀಪ್ ಹೇಳಿದ್ದು ನೆನಪಿದೆ. ಟಗರು ಮೂಲಕ ನನಗಾಗಿಯೇ ಪಾತ್ರಗಳನ್ನು ಚಿತ್ರಕತೆ ಬರೆಯುವಾಗಲೇ ಬುಕ್ ಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಇನ್ಸೆಪೆಕ್ಟರ್ ಪಾತ್ರ ಮಾಡುತ್ತಿರುವ ಧನಂಜಯ್ ಹೇಳಿದರು. ಸಮಾರಂಭಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ರಾಘವೇಂದ್ರರಾಜ್ಕುಮಾರ್ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಆಗಮಿಸಿದ್ದರು.
No Comment! Be the first one.