ಸಾಕಷ್ಟು ವಿಚಾರಗಳಿಂದ ಸುದ್ದಿಯಾಗುತ್ತಿರುವ ಸಲಗ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿಸಿಕೊಂಡಿದೆ. ಸದ್ಯ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಆರಂಭಿಸಿರುವ ಸಲಗ ಚಿತ್ರತಂಡ ಸಾಹಸ ಸನ್ನಿವೇಶವೊಂದನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸುತ್ತಿದೆ. ಕಾಲಿವುಡ್ ಸ್ಟಂಟ್ ಮಾಸ್ಟರ್ ಜಾಲಿ ಬಾಸ್ಟಿನ್ ಈ ದೃಶ್ಯದ ಸಂಯೋಜನೆಯನ್ನು ಮಾಡುತ್ತಿದ್ದು, ಸ್ವತಃ ಅವರೇ ಫೇಸ್ ಬುಕ್ ಲೈವಿಗೆ ಬಂದು ಶೂಟಿಂಗ್ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Gepostet von Jolly Bastian am Dienstag, 16. Juli 2019

ಇದೇ ಮೊಟ್ಟ ಮೊದಲ ಬಾರಿಗೆ ಸಲಗ ಮೂಲಕ ದುನಿಯಾ ವಿಜಯ್ ನಟನೆಯ ಜತೆಗೆ ನಿರ್ದೆಶನ ಮಾಡುತ್ತಿರುವ ಚಿತ್ರ ಇದಾಗಿದ್ದು, ಸಂಜನಾ ಆನಂದ್ ಕರಿ ಚಿರತೆಗೆ ನಾಯಕಿಯಾಗಿದ್ದಾರೆ. ಅಲ್ಲದೇ ಡಾಲಿ ಧನಂಜಯ್ ಪೊಲೀಸ್ ಪಾತ್ರಧಾರಿಯಾಗಿ ಮಿಂಚಲಿದ್ದಾರೆ. ಇನ್ನು ಟಗರು ಚಿತ್ರದಲ್ಲಿ ಕೆಲಸ ಮಾಡಿದ್ದ ತಂಡವೇ ಸಲಗ ಚಿತ್ರದಲ್ಲಿಯೂ ಕಾರ್ಯನಿರ್ವಹಿಸಲಿದ್ದು, ಕೆ.ಪಿ. ಶ್ರೀಕಾಂತ್ ರವರೇ ಸಲಗವನ್ನು ನಿರ್ಮಾಣ ಮಾಡಲಿದ್ದಾರೆ.

 

CG ARUN

ಮೀಟು ಸುಂದರಿ ಗರ್ಭಿಣಿಯಂತೆ!

Previous article

ಆಗಸ್ಟ್ ಗೆ ತಮಿಳು ಸಿನಿಮಾ ಬಕ್ರೀದ್ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *