ಸೆಲೆಬ್ರೆಟಿಗಳು ಪಬ್ಲಿಕ್ಕಿನಲ್ಲಿ ಏನಾದರೂ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುವುದಂತೂ ಕನ್ ಫರ್ಮ್. ಸೆಲೆಬ್ರೆಟಿಗಳೂ ನಮ್ಮಂತೆ ಮನುಷ್ಯರು, ಅವರೂ ಶೂಟಿಂಗ್ ಮಾಡಿ ಸುಸ್ತಾಗಿರುತ್ತಾರೆ, ಆಯಾಸವಾಗಿರುತ್ತದೆ, ಅವರಿಗೂ ವೈಯಕ್ತಿಕ ಬದುಕಿದೆ ಎಂಬುದನ್ನು ಲೆಕ್ಕಿಸದ ಅಭಿಮಾನಿಗಳು ಇಂಗುತಿಂದ ಮಂಗಗಳಂತೆ ಆಡುತ್ತಲೇ ಇರುತ್ತಾರೆ.
ಇತ್ತೀಚಿಗೆ ಮುಂಬೈನಲ್ಲಿ ‘ಹಮ್ ಆಪ್ಕೆ ಹೈ ಕೌನ್’ ಸಿನಿಮಾ ಪ್ರದರ್ಶನ ಆಯೋಜಿಸಲಾಗಿತ್ತು. ಅದೇ ವೇಳೆ ಸಿನಿಮಾ ನೋಡಲು ಬಂದಿದ್ದ ಸಲ್ಮಾನ್ ಖಾನ್ ಅವರನ್ನು ಅವರ ಅಭಿಮಾನಿಯೊಬ್ಬರು ಮುಜುಗರಕ್ಕೀಡುಮಾಡಿದ್ದಾರೆ. ಯೆಸ್… ಮಾಧುರಿ ದೀಕ್ಷಿತ್ ಅವರೊಂದಿಗೆ ಸಿನಿಮಾ ನೋಡಲು ಸಲ್ಮಾನ್ ಚಿತ್ರಮಂದಿರದ ಒಳಗೆ ಹೋದ ತಕ್ಷಣ ಮಹಿಳೆಯೊಬ್ಬರು ಸಲ್ಮಾನ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮನವಿ ಮಾಡಿದರು. ನಟ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆಯೇ ಆಕೆ ಅವರನ್ನು ಕೈಹಿಡಿದು ಎಳೆಯಲು ಪ್ರಯತ್ನಿಸುತ್ತಾರೆ. ಭದ್ರತಾ ಸಿಬ್ಬಂದಿ ಅಕೆಯನ್ನು ತಡೆಯುತ್ತಾರೆ. ಮುಜುಗರಕ್ಕೆ ಒಳಗಾದ ಸಲ್ಮಾನ್ ಯಾವುದೇ ಪ್ರತಿಕ್ರಿಯೆ ನೀಡದೇ ಸಿನಿಮಾ ನೋಡಲು ಹೋದರು. ಸದ್ಯ ಈ ವಿಡಿಯೊ
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
No Comment! Be the first one.